ಇತರೆ
ಕಾರ್ಕಳ: ಗೋಡೌನ್‌ನಿಂದ 2 ಕ್ವಿಂಟಾಲ್ ಅಡಿಕೆ ಕಳವು, ದೂರು
Views: 6
ಕನ್ನಡ ಕರಾವಳಿ ಸುದ್ದಿ:ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ ಅಡಿಕೆ ಗೋಡೌನ್‌ನಿಂದ ಸುಮಾರು 95,000 ರೂಪಾಯಿ ಮೌಲ್ಯದ 2 ಕ್ವಿಂಟಾಲ್ ಸಿಪ್ಪೆ ಸುಲಿದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಮಿಯ್ಯಾರು ಗ್ರಾಮದ ‘ಮಣಿಕಂಠ ಕೃಪಾ’ ನಿವಾಸಿ ಎಸ್. ರಮೇಶ್ ಶೆಟ್ಟಿ ಎಂಬವರು ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಮೇಶ್ ಶೆಟ್ಟಿ ಅವರ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಗಣಪತಿ ಮತ್ತು ಮಂಜುಳಾ ಎಂಬವರು ಆ.20ರಿಂದ ಸೆ.28ರ ಅವಧಿಯಲ್ಲಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.






