ಇತರೆ
ಬಸ್ರೂರು ಸಮೀಪದ ಬಿ.ಹೆಚ್ ನ ದುರ್ಗಾಭವನ್ ನಾರಾಯಣ ಶೆಟ್ಟಿಗಾರ್ ನಿಧನ
Views: 155
ಕನ್ನಡ ಕರಾವಳಿ ಸುದ್ದಿ: ಹಲವಾರು ವರ್ಷಗಳಿಂದ ಬಿ.ಹೆಚ್ ಸರ್ಕಲ್ ಬಳಿ ದುರ್ಗಾಭವನ್ ಎನ್ನುವ ಪುಟ್ಟ ಹೋಟೆಲ್ ನಡೆಸುತ್ತಿದ್ದ ಅವರು ಗ್ರಾಹಕ ಸ್ನೇಹಿಯಾಗಿದ್ದರು. ಅವರು ತಯಾರಿಸುತ್ತಿದ್ದ ಈರುಳ್ಳಿ ಬಜೆ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಅವರು ತಯಾರಿಸುತ್ತಿದ್ದ ಈರುಳ್ಳಿ ಬಜೆ ತಿನ್ನಲು ಬೇರೆ ಬೇರೆ ಭಾಗದ ಗ್ರಾಹಕರು ಬರುತ್ತಿದ್ದರು. ಕೇವಲ ಈರುಳ್ಳಿ ಬಜೆ ಮಾತ್ರವಲ್ಲ ಇತರ ಕರಿದ ತಿಂಡಿಗೂ ಅವರು ಪ್ರಸಿದ್ಧರಾಗಿದ್ದರು. ಮೂರಾಲ್ಕು ವರ್ಷಗಳ ಹಿಂದೆ ಅವರು ಹೋಟೆಲ್ ವ್ಯವಹಾರ ನಿಲ್ಲಿಸಿದ್ದರು.
ಅಲ್ಪಕಾಲದ ಅನಾರೋಗ್ಯದಿಂದ ಅವರು ಅ.4ರ ರಾತ್ರಿ ನಿಧನರಾದರು. ಅವರಿಗೆ 79ವರ್ಷ ವಯಸ್ಸಾಗಿತ್ತು.






