ಸಾಮಾಜಿಕ

ಡಿವೊರ್ಸ್ ವಿಚಾರಣೆ ಮುಗಿಸಿ ನ್ಯಾಯಾಲಯದ ಆವರಣದಲ್ಲಿಯೇ ಗಂಡ- ಹೆಂಡತಿ ಹಾಗೂ ಸಂಬಂಧಿಕರ ಮಾರಾಮಾರಿ ಹೊಡೆದಾಟ!

Views: 61

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಕುಟುಂಬ ನ್ಯಾಯಾಲಯದ ಆವರಣದಲ್ಲಿಯೇ ಗಂಡ- ಹೆಂಡತಿ ಹಾಗೂ ಅವರ ಸಂಬಂಧಿಕರು ಹಿಂಸಾತ್ಮಕವಾಗಿ ಹೊಡೆದು ಕೊಂಡಿರುವ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ಒಬ್ಬರಿಗೊಬ್ಬರು ಕಪಾಳಮೋಕ್ಷ ಹಾಗೂ ಗುದ್ದಾಟ ಮಾಡಿಕೊಂಡಿದ್ದಾರೆ.

ಡಿವೊರ್ಸ್ ವಿಚಾರಣೆ ಮುಗಿಸಿ ಕೋರ್ಟ್‌ನ ಹಾಲ್‌ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸಮರ್ಧಿರಾ ನಿವಾಸಿ ಪ್ರಿಯಾ ತ್ರಿಪಾಠಿ ಮತ್ತು ಕೊಯಿಲಾಡಾದ ಮನೀಷ್ ಕುಮಾರ್ ಎಂಬವರ ನಡುವೆ ದಾಂಪತ್ಯ ಕಲಹ ಬಂದಿದ್ದು ಕಳೆದ ಹಲವು ದಿನಗಳಿಂದ ವಿಚಾರಣೆ ನಡೆಯುತ್ತಿತ್ತು.

ಈ ವೇಳೆ ಮನೀಷ್ ತನ್ನ ಮೇಲೆ ಹಲ್ಲೆ ನಡೆಸಿ,ಕುತ್ತಿಗೆ ಹಿಸುಕಲು ಯತ್ನಿಸಿದ್ದಾನೆ ಎಂದು ಪ್ರಿಯಾ ಅವರು ಆರೋಪ ಮಾಡಿದ್ದಾರೆ. ಇದನ್ನು ತಡೆಯಲು ಬಂದ ತಂದೆ ಲಕ್ಷ್ಮೀಕಾಂತ್ ಮತ್ತು ಸಹೋದರಿ ಪ್ರಿಯಾಂಕಾ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಎರಡೂ ಕಡೆಯವರು ಕೈಕೈ ಮಿಲಾಯಿಸಿ, ಪರಸ್ಪರ ಹಲ್ಲೆ ಮಾಡಿಕೊಳ್ಳುತ್ತಿರುವಾಗ ಕೋರ್ಟ್ ಆವರಣದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ ಎಂದು ಕೊತ್ವಾಲಿ ಮಹಾರಾಜ್‌ಗಂಜ್‌ನ ಸ್ಟೇಷನ್ ಹೌಸ್ ಆಫೀಸರ್ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ. ಘರ್ಷಣೆಗೆ ಕಾರಣವಾದ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Related Articles

Back to top button
error: Content is protected !!