ಇತರೆ

ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ: ರೈ ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲು

Views: 137

ಕನ್ನಡ ಕರಾವಳಿ ಸುದ್ದಿ : ಕಾರ್ಕಳ ಸಮೀಪದ ಸಾಣೂರಿನಲ್ಲಿ ಮಾಜಿ ಸಚಿವ ರಮನಾಥ ರೈ ಅವರಿದ್ದ ಕಾರಿಗೆ ಬಸ್‌ವೊಂದು ಢಿಕ್ಕಿಯಾಗಿದೆ.

ಕಾರ್ಕಳದಿಂದ ಮಂಗಳೂರಿಗೆ ಹೋಗುವ ಖಾಸಗಿ ಬಸ್, ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ರಮಾನಾಥ ರೈ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಚಾಲಕ ಹಾಗೂ ಅವರ ಪಿಎಗೆ ಗಾಯಗಳಾಗಿದೆ. ಗಾಯಾಳುಗಳು ಕಾರ್ಕಳದ ಟಿಎಂಎ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಕಾರಿನಲ್ಲಿ ಸಿಲುಕಿಕೊಂಡಿದ್ದ ರಮಾನಾಥ ರೈ ಹಾಗೂ ಇತರರನ್ನು ಹೊರತೆಗೆದು ಮಾನವೀಯತೆ ಮೆರೆದಿದ್ದಾರೆ.

ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ಸಂಚಾರ ಸುಗಮಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 

Related Articles

Back to top button
error: Content is protected !!