ಧಾರ್ಮಿಕ

ಬಾರ್ಕೂರು: ಶೆಟ್ಟಿಗಾರ್ ಇಂಡಸ್ಟ್ರೀಸ್ ಸಾರ್ವಜನಿಕ ಗಣೇಶೋತ್ಸವ, ಬಹುಮಾನ ವಿತರಣೆ, ಅಭಿನಂದನಾ ಕಾರ್ಯಕ್ರಮ 

Views: 50

ಕನ್ನಡ ಕರಾವಳಿ ಸುದ್ದಿ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಶೆಟ್ಟಿಗಾರ್ ಇಂಡಸ್ಟ್ರೀಸ್ ರಂಗನಕೇರಿ ಬಾರ್ಕೂರು ಇದರ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಸೆ. 15ರಂದು ರಾತ್ರಿ ಬಹುಮಾನ ವಿತರಣೆ, ದೈವ ನರ್ತಕರಿಗೆ ಸನ್ಮಾನ, ಅಭಿನಂದನಾ ಕಾರ್ಯಕ್ರಮ ನಡೆಯಿತು. 

ವೇದಮೂರ್ತಿ ಎನ್ ರಮೇಶ್ ಭಟ್ ನಾಯರ್ ಬೆಟ್ಟು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, 21ನೇ ಗಣೇಶೋತ್ಸವ  ಈ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿ ಗಣೇಶನ ಪೂಜೆಯಲ್ಲಿ 21 ಸಂಖ್ಯೆಗೆ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವ ಮೂಲಕ ತ್ವರಿತ ಸಂತುಷ್ಟನಾಗಿ ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವ ಮೂಲಕ ಭಕ್ತರ ಸಕಲ ಸಂಕಷ್ಟಗಳನ್ನು ಅಡೆ-ತಡೆಗಳನ್ನು ನಿವಾರಿಸುವ ಶಕ್ತಿ ಹೊಂದಿದ್ದು, ಆ ಮೂಲಕ ಎಲ್ಲರಿಗೂ ನೆಮ್ಮದಿ ಮತ್ತು ಶಾಂತಿ ದೊರೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿ ಪತ್ರಕರ್ತ ವಸಂತ ಗಿಳಿಯಾರು ಮಾತನಾಡಿ, ಅಚಲವಾದ ಕಠಿಣ ಪರಿಶ್ರಮ ಪ್ರಾಮಾಣಿಕವಾಗಿ ದುಡಿದು ಎಲ್ಲರ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಶ್ರೀನಿವಾಸ ಶೆಟ್ಟಿಗಾರರು ತಾವು ಸಂಪಾದನೆ ಮಾಡಿದ ಭಾಗವನ್ನು ಧಾರ್ಮಿಕ ಕಾರ್ಯಕ್ರಮ ಮತ್ತು ಸಮಾಜ ಸೇವೆಗಾಗಿ ತೊಡಗಿಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ ಎಂದರು.

ವೇದಿಕೆಯಲ್ಲಿ ಶ್ರೀಮತಿ ಯಶೋದಾ ಶ್ರೀನಿವಾಸ ಶೆಟ್ಟಿಗಾರ್, ಮಹೇಶ್ ಉಡುಪ, ಪ್ರಮೋದ್ ಮಂದಾರ್ತಿ, ಶಾಂತರಾಮ್ ಶೆಟ್ಟಿ ಬಾರ್ಕೂರು, ಸಂಪತ್ ಕುಮಾರ್ ಶೆಟ್ಟಿ, ಸುಧಾಕರ್ ಶೆಟ್ಟಿ, ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ದೈವ ನರ್ತಕರಾದ ವಿಠಲ ಪಾತ್ರಿ, ರಘು ಪಾತ್ರಿ, ಕೃಷ್ಣ ಮಡಿವಾಳ ಮಂದಾರ್ತಿ, ಮಹಾಬಲ ಪಾತ್ರಿ, ಸುಧೀರ್ ಖಾತ್ರಿ, ನಾಗರಾಜ್ ಪಾತ್ರಿಗಳಿಗೆ ಮತ್ತು ವಿಶೇಷ ಸಾಧಕರಾದ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ವಿ. ಎಸ್, ಶಂಭು ತಿಂಗಳಾಯ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಖುಷಿ ಶೆಟ್ಟಿಗಾರ್ ಬಸ್ರೂರು, ಗಾಯತ್ರಿ, ರೂಪೇಶ್, ಶಯನ್, ಧನ್ವಿತ್ ಅವರನ್ನು ಸನ್ಮಾನಿಸಲಾಯಿತು. 

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಾದ ಸ್ವಾಗತ್, ಅದ್ವಿತಿ, ಧಾತ್ರಿ, ಜಮುನಾ, ರೋಶನಿ ಡಿಸೋಜ, ಮನೀಷ, ಶ್ವೇತ, ಖುಷಿ, ಜ್ಞಾನೇಶ್, ಶ್ರಾವ್ಯ ಅವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. 

ಬಾಬು ಕುಲಾಲ್ ಮತ್ತು ಜಪ್ತಿ ಸುಬ್ಬು ಶೆಟ್ಟಿಗಾರ ಅವರ ಪತ್ನಿಯ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು. 

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀನಿವಾಸ್ ಉಡುಪ, ರೋಷನ್ ಲೋಬೋ, ಹರೀಶ್ ಕೆ, ವೀಣಾ, ಸಂದೀಪ್ ಪೂಜಾರಿ, ಡಾ. ರಕ್ಷಿತ್, ಸಂದೀಪ್ ಅಮಿನ್, ವಿಶಾಲ್ ಮಹೇಶ್ ಪೂಜಾರಿ ಅವರಿಗೆ ಸನ್ಮಾನಿಸಲಾಯಿತು. 

ಸಂದೀಪ್ ಪೂಜಾರಿ ,ಎಲ್ ಕೆ ಶೆಟ್ಟಿಗಾರ್, ಅಕ್ಷಯ್ ಶೆಟ್ಟಿಗಾರ್ ಸತೀಶ್ ಅಮೀನ್, ಸುಬ್ರಹ್ಮಣ್ಯ, ವಿನಯ್ ಕುಮಾರ್ ಸಭ್ಯ ಫ್ರೆಂಡ್ಸ್, ಹರೀಶ್, ಉದಯ ಶೆಟ್ಟಿಗಾರ್, ಸುರೇಶ್ ಟಿ, ಸುರೇಶ್ ಪೂಜಾರಿ, ಅಶೋಕ್ ಪೂಜಾರಿ ಇನ್ನಿತರ ಸಾಧಕರಿಗೆ ಗೌರವಿಸಲಾಯಿತು. 

ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾರ್ಕೂರು ರಂಗನ ಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ,ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಉದ್ದೇಶದಿಂದ ಅತ್ಯಂತ ಶ್ರದ್ಧೆ ಭಕ್ತಿ ಪೂಜಾ ವಿಧಿ ವಿಧಾನಗಳ ಮೂಲಕ ದೇವರನ್ನು ಆರಾಧಿಸಿಕೊಂಡು ಎಲ್ಲಾ ಸಮುದಾಯದವರು ಪಾಲ್ಗೊಳ್ಳುವುದರ ಮುಖಾಂತರ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ತರಲಿ ತಮ್ಮೆಲ್ಲರ ಉಪಸ್ಥಿತಿಯಿಂದ ಸಂಭ್ರಮಕ್ಕೆ ಇನ್ನಷ್ಟು ಮೆರವು ನೀಡಿದೆ ಎಂದರು.

ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಅಮೀನ್, ದರ್ಶನ್ ಉಡುಪ ಸನ್ಮಾನಿತರ ಮತ್ತು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಸಭಾ ಕಾರ್ಯಕ್ರಮದ ನಂತರ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಸತೀಶ್ ಹೆಮ್ಮಾಡಿ ಮತ್ತು ತಂಡದವರಿಂದ ಜಾದು ವಿಸ್ಮಯ ಕಾರ್ಯಕ್ರಮ ನಡೆಯಿತು.

 

Related Articles

Back to top button
error: Content is protected !!