ರಾಜಕೀಯ

ರಾಜ್ಯಾಧ್ಯಕ್ಷ ಸ್ಥಾನದ ವಾರಂಟಿ ಮುಗಿದ ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ—ಬಸನಗೌಡ ಪಾಟೀಲ್ ಯತ್ನಾಳ್

Views: 21

ಕನ್ನಡ ಕರಾವಳಿ ಸುದ್ದಿ: ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ ಅಶೋಕ್, ಸುನೀಲ್ ಕುಮಾರ್ ಎಲ್ಲರೂ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು. ಆಗ ವಿಜಯೇಂದ್ರ 5 ನಿಮಿಷ ಬಾವಿಯಲ್ಲಿ ನಿಲ್ಲಲ್ಲಿಲ್ಲ. ಬರಿ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದ್ರೆ ಕ್ರೆಡಿಟ್ ಬರುತ್ತಾ? ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಮೇಲೆ ಪಾದಾಯತ್ರೆ ಗ್ಯಾರಂಟಿ ಆಗಿದೆ. ವಾರಂಟಿ ಮುಗಿದಿದೆ ಹೀಗಾಗಿ ತಮ್ಮ ಅಸ್ತಿತ್ವ ತೋರಿಸಲು, ಇದರಿಂದ ಹೀರೋ ಆಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ಪಾದಯಾತ್ರೆಯಿಂದ ತಾವು ಹೀರೋ ಆಗಬೇಕು ಎಂದು ಇದೆಲ್ಲ ಮಾಡ್ತಿದ್ದಾರೆ. ಹೋರಾಟ, ಪಾದಯಾತ್ರೆ ಮಾಡುವುದಾದರೆ ಕೆಪಿಎಸ್‌ಸಿ ಹಗರಣ ಹೋರಾಟ ಮಾಡಲಿ ಎಂದು ತಿಳಿಸಿದ್ದಾರೆ.

Related Articles

Back to top button
error: Content is protected !!