ಯುವಜನ

ಬೈ ಬೈ ಪಪ್ಪಾ ಎಂದು ಸೇತುವೆಯಿಂದ ನದಿಗೆ ಜಿಗಿದ ಯುವತಿ!

Views: 126

ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳು ತಂದೆಗೆ ‘ಬೈ ಬೈ ಪಪ್ಪಾ’ ಎಂದು ಚೆನಾಬ್ ನದಿಗೆ  ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ದೋಡಾದ ಪ್ರೇಮ್ ನಗರದಲ್ಲಿ ವೈರಲ್ ಆಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕೃಷ್ಣ ಲಾಲ್ ಅವರ ಪುತ್ರಿ ಪಾಯಲ್ ದೇವಿ ಎಂದು ಗುರುತಿಸಲಾಗಿದೆ

ಪಾಯಲ್ ದೇವಿ ಜಾತ್ರೆಗೆ ಹೋಗಿದ್ದಳು. ಬಳಿಕ ಪರಿಚಿತ ವ್ಯಕ್ತಿಯೊಬ್ಬರ ಜೊತೆ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಳು. ಬೈಕ್ ಸೇತುವೆ ಮೇಲೆ ಬಂದಾಗ ಆಕೆಯ ದುಪ್ಪಟ್ಟಾ ಬೈಕ್ ಚಕ್ರಕ್ಕೆ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಬೈಕ್ ನಿಲ್ಲಿಸಿ ದುಪಟ್ಟಾ ಬಿಡಿಸಲು ಮುಂದಾಗಿದ್ದರು. ಆಗ ಪಾಯಲ್ ನದಿಯ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಸೇತುವೆಯ ಅಂಚಿಗೆ ಹೋಗಿದ್ದ ಯುವತಿಯನ್ನು ಜನ ಸಮಾಧಾನಪಡಿಸಲು ಪ್ರಯತ್ನಿಸಿದರು. ಜಿಗಿಯದಂತೆ ವಿನಂತಿಸಿದರು. ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಸಹ ಅವಳ ತಂದೆಗೆ ಕರೆ ಮಾಡಿ ಏನಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವೇಳೆ ತಂದೆ ಸಹ ಮಗಳಿಗೆ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ಬೈ ಬೈ ಪಪ್ಪಾ ಎಂದು ಯುವತಿ ನದಿಗೆ ಜಿಗಿದಿದ್ದಾಳೆ ಎಂದು ವರದಿಯಾಗಿದೆ. ರಕ್ಷಣಾ ಸಿಬ್ಬಂದಿ ಆಕೆಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

 

Related Articles

Back to top button
error: Content is protected !!