ಕುಂದಾಪುರ:ಮರವಂತೆ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ,6 ಮಂದಿ ರಕ್ಷಣೆ, ಅಪಾರ ನಷ್ಟ
Views: 102
ಕನ್ನಡ ಕರಾವಳಿ ಸುದ್ದಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ನೀರು ಒಳಗೆ ಬಂದು ಮುಳುಗಿದ ಘಟನೆ ಶುಕ್ರವಾರ ತಡರಾತ್ರಿ ಮರವಂತೆ ಸಮೀಪದ ಅರಬೀ ಸಮುದ್ರದಲ್ಲಿ ಸಂಭವಿಸಿದೆ.
ಮೀನುಗಾರರು ಸಹಕಾರದೊಂದಿಗೆ ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.2,500 ಲೀ. ಡೀಸೆಲ್, ಜಿಪಿಎಸ್ ಫೈರ್ ಫೈಬರ್ ವಯರ್ ಲೆಸ್ ಪರಿಕರ, ಸುಮಾರು 2.50 ಲಕ್ಷ ರೂ. ಮೌಲ್ಯದ ಮೀನು, ಬಲೆ, ಬೋಟು, ಇನ್ನಿತರ ಸೊತ್ತುಗಳೆಲ್ಲ ಸೇರಿದಂತೆ ಬೋಟು ಸಂಪೂರ್ಣ ಮುಳುಗಡೆಯಾಗಿದ್ದರಿಂದ ಅಂದಾಜು 45 ಲಕ್ಷ ರೂ. ವರೆಗೆ ನಷ್ಟ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೋಟ ಕದ್ರಿ ಕಟ್ಟು ನಿವಾಸಿ ಕೃಷ್ಣ ಪುತ್ರನ್ ಎಂಬವರ ಸಿಂಚನಾ ಎಂಬ ಬೋಟು ಇದಾಗಿದ್ದು, ಆ.12 ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು.
ಮುಳುಗುತ್ತಿದ್ದ ಬೋಟನ್ನು ಎರಡು ಬೋಟಿನವರ ಸಹಕಾರದಿಂದ ಬೊಟನ್ನು ಹಗ್ಗ ಕಟ್ಟಿ, ಎಳೆದು ತಂದು ದಡದತ್ತ ತರಲು ಪ್ರಯತ್ನಿಸಿದ್ದಾರೆ.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.14ರ ರಾತ್ರಿ ಬೋಟಿನ ತಳಭಾಗಕ್ಕೆ ಏನೋ ವಸ್ತು ತಗಲಿ ಒಳಗೆ ನೀರು ಬರಲಾರಂಭಿಸಿತು. ಬೋಟು ಮುಳುಗುತ್ತಿದ್ದನ್ನು ಕಂಡು ಕೂಡಲೇ ಅಲ್ಲಿಯೇ ಮೀನುಗಾರಿಕೆ ನಡೆಸುತ್ತಿದ್ದ ಬೃಂದಾವನ ಹಾಗೂ ಗುರು ದರ್ಶನ್ ಬೋಟಿನವರು ಹತ್ತಿರ ಬಂದು, ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.






