ರಾಜಕೀಯ
ಡಿಕೆಶಿ ಸಚಿವ ಸಂಪುಟದಲ್ಲಿ ಒಂದೇ ಮಹಿಳಾ ಸಚಿವ ಸ್ಥಾನಕ್ಕೆ ಭಾರೀ ಫೈಟ್!
Views: 65
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಬಳಿಕ ಮಹಿಳಾ ಪ್ರತಿನಿಧಿಗಳಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಖಾಲಿ ಇರುವ ಆ ಸ್ಥಾನಕ್ಕಾಗಿ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಗಾಯತ್ರಿ ಶಾಂತೇಗೌಡ ಸೇರಿದಂತೆ ಹಲವು ಮಹಿಳಾ ಶಾಸಕಿಯರು ಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ.
ಒಂದೇ ಸಚಿವ ಸ್ಥಾನಕ್ಕೆ ಭಾರೀ ಫೈಟ್
20 ಸಚಿವ ಸ್ಥಾನಗಳಲ್ಲಿ 19 ಸ್ಥಾನಗಳು ಭರ್ತಿಯಾಗಿದ್ದು, ಒಂದು ಸ್ಥಾನ ಇನ್ನೂ ಖಾಲಿಯಿದೆ. ಉಳಿದ ಸ್ಥಾನಕ್ಕೆ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕೊನೆ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಅವಕಾಶ ಕೈತಪ್ಪಿದ್ದು, ಆರತಿ ಕೃಷ್ಣ, ಲಕ್ಷ್ಮೀ ಹೆಬ್ಬಾಳ್ಳರ್ ಹಾಗೂ ನಯನಾ ಮೋಟಮ್ಮ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿ ಕೇಳಿಬರುತ್ತಿವೆ.






