ಇತರೆ

ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ:ಯೋಧ ಸಾವು 

Views: 56

ಕನ್ನಡ ಕರಾವಳಿ ಸುದ್ದಿ: ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66 ರ ಕೆಪಿಟಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯೋಧನೋರ್ವ ಮೃತಪಟ್ಟಿದ್ದಾರೆ

ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪ್ಪಿನಂಗಡಿ ನಿವಾಸಿ ಸೀತಾರಾಮ ಗೌಡ (47) ಮೃತಪಟ್ಟವರು.

ಅವರು ಬುಧವಾರ ಸಂಜೆ ಸ್ಕೂಟರ್‌ನಲ್ಲಿ ಕೆಪಿಟಿ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುತ್ತಿದ್ದಾಗ ಸ್ಕೂಟರ್ ಡಿವೈಡರ್‌ಗೆ ಢಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಅವರು ಗಂಭೀರ ಗಾಯಗೊಂಡು ಬಳಿಕ ಮೃತಪಟಿದ್ದಾರೆ

ಬೇರೆ ವಾಹನ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆಯೇ ಅಥವಾ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮಂಗಳೂರು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೀತಾರಾಮ ಗೌಡ ಅವರು ಸಿ.ಐ.ಎಸ್. ಎಫ್. ಜವಾನರಾಗಿದ್ದು, ಜಮ್ಮು ಸೆಂಟ್ರಲ್ ಜೈಲಿನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜುಲೈ 3 ರಂದು ರಜೆಯ ಮೇಲೆ ಊರಿಗೆ ಬಂದಿದ್ದ ಅವರು ಜುಲೈ 7 ರಂದು ಎಸ್.ಐ. ಆರ್. ದಾಖಲಾತಿ ನೀಡಲು ತನ್ನ ಊರಿನ ಮನೆಯಾದ ಕೊಯಿಲಾಕ್ಕೆ ಹೋಗಿದ್ದರು. ನಿನ್ನೆ ಮಂಗಳೂರು ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

Related Articles

Back to top button
error: Content is protected !!