ಇತರೆ

ಸೆಲ್ಫಿ ಕ್ಲಿಕ್ಕಿಸುವಾಗ ಕಾಲು ಜಾರಿ ಆಳದ ಕಂದಕಕ್ಕೆ ಬಿದ್ದ ಉಪನ್ಯಾಸಕ!

Views: 123

ಕನ್ನಡ ಕರಾವಳಿ ಸುದ್ದಿ: ತುಮಕೂರು ದೇವರಾಯನ ದುರ್ಗ ಅರಣ್ಯ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ 15 ಅಡಿ ಆಳಕ್ಕೆ ಕಾಲು ಜಾರಿ ಬಿದ್ದು, ಉಪನ್ಯಾಸಕರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಬುಗುಡನಳ್ಳಿ ಗ್ರಾಮದ ಶಿವಪ್ರಸಾದ್ ಗಾಯಗೊಂಡ ಉಪನ್ಯಾಸಕರು. ಅರಸೀಕೆರೆಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಸ್ನೇಹಿತರೊಂದಿಗೆ ದೇವರಾಯನ ದುರ್ಗ ಅರಣ್ಯ ಪ್ರದೇಶಕ್ಕೆ ತೆರಳಿದ್ದರು.

ಶಿವಪ್ರಸಾದ್ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋಗಿ ಸುಮಾರು 15 ಅಡಿ ಆಳಕ್ಕೆ ಜಾರಿ ಬಿದ್ದಿದ್ದಾರೆ. ಇವರ ಕೂಗಾಟ ಚೀರಾಟ ಕೇಳಿದ ತಕ್ಷಣವೇ ಸ್ಥಳದಲ್ಲಿದ್ದವರು ತೆರಳಿ ಅವರನ್ನು ರಕ್ಷಣೆ ಮಾಡಿ ಕರೆ ತಂದಿದ್ದಾರೆ.

ಗಾಯಗೊಂಡಿರುವ ಶಿವಪ್ರಸಾದ್ ಅವರಿಗೆ ತುಮಕೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಪನ್ಯಾಸಕರು ಪೂರ್ತಿ ಕೆಳಗೆ ಬಿದ್ದಿದ್ದರೆ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಕಲ್ಲಿದ್ದರಿಂದ ಅವರು ಬಚಾವ್ ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Related Articles

Back to top button
error: Content is protected !!