ಇತರೆ
ದಯಾನಿಧಿ ಬಂಟರ ಬಳಗ ಹುಣ್ಸೆಮಕ್ಕಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Views: 200
ಕನ್ನಡ ಕರಾವಳಿ ಸುದ್ದಿ: ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡ ದಯಾನಿಧಿ ಬಂಟರ ಬಳಗ ಹುಣ್ಣಿಮಕ್ಕಿ ಹೊಂಬಾಡಿ-ಮಂಡಾಡಿ, ಕಾಳಾವರ, ಕೊರ್ಗಿ, ಜಪ್ತಿ, ಮೊಳಹಳ್ಳಿ, ಯಡಾಡಿ-ಮತ್ಯಾಡಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬರುತ್ತದೆ. ಈ ಗ್ರಾಮದ ಆರೋಗ್ಯ ಸಮಸ್ಯೆ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಸಮಸ್ಯೆ ಇರುವವರಿಗೆ ಸ್ಪಂದಿಸುವ ದೃಷ್ಠಿಯಲ್ಲಿ 4 ವರ್ಷದ ಹಿಂದೆ ಹುಟ್ಟಿಕೊಂಡಿದೆ. ಪ್ರತಿ ವರ್ಷದಂತೆ ಈ ಸಾಲಿನಲ್ಲಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಓದಿದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 11 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅದ್ಯಕ್ಷರಾದ ಗಣೇಶ ಶೆಟ್ಟಿ ಹುಣ್ಸೆಮಕ್ಕಿ, ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಗೌರವ ಸದಸ್ಯರಾದ ಉದಯಕುಮಾರ ಶೆಟ್ಟಿ ಕಾಳಾವರ, ರಾಜಶೇಖರ ಶೆಟ್ಟಿ ಕೊರ್ಗಿ, ರಮೇಶ ಶೆಟ್ಟಿ ಹುಣ್ಣಿಮಕ್ಕಿ, ಚೈತ್ರ ಅಡಪ ಮೊಳಹಳ್ಳಿ, ನವೀನ ಶೆಟ್ಟಿ ಕೊರ್ಗಿ ಉಪಸ್ಥಿತರಿದ್ದರು.






