ಪ್ರೀತಿಗಾಗಿ ಕುಟುಂಬದವರನ್ನೇ ಎದುರು ಹಾಕಿಕೊಂಡು ಮದುವೆಯಾಗಿದ್ದ ವಿವಾಹಿತೆ ಅನುಮಾನಸ್ಪದ ಸಾವು!
Views: 46
ಕನ್ನಡ ಕರಾವಳಿ ಸುದ್ದಿ: ಪ್ರೀತಿಗಾಗಿ ಕುಟುಂಬದವರನ್ನೇ ಎದುರು ಹಾಕಿಕೊಂಡು ಮದುವೆಯಾಗಿದ್ದ ವಿವಾಹಿತೆಯೊಬ್ಬಳು ಕೊನೆಗೆ ಅನುಮಾನಸ್ಪದ ರೀತಿಯಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಮೋಹಿತಾ ಮೃತ ಮಹಿಳೆ. ಪತಿಯ ಕಿರುಕುಳಕ ತಾಳಲಾರದೆ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದನ್ನು ಕೊಲೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ನೀನಿಲ್ಲದಿದ್ದರೆ ನಾನು ಬದುಕಲ್ಲ, ನೀನೇ ಸರ್ವಸ್ವ ಎಂದು ಮೋಡಿ ಮಾಡಿ ಪ್ರೀತಿಯ ಬಲೆಗೆ ಸಿಲುಕಿಸಿದ್ದ ರಾಜಕೀಯ ನಾಯಕನ ಅಸಲಿ ಮುಖ ಬಯಲಾಗಿದೆ. ಮದುವೆಯಾಗಿ 5 ವರ್ಷ ಕಳೆದಿದ್ದು, ಇಬ್ಬರೂ ಮಕ್ಕಳೂ ಇದ್ದಾರೆ. ಆದರೂ ಆತ ಬೇರೊಂದು ವಿವಾಹಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ.
ಈ ವಿಷಯ ತಿಳಿದ ಬಳಿಕ ಬೇಸತ್ತ ಯುವತಿ, ಪತಿ ನನಗೆ ದ್ರೋಹ ಮಾಡಿದ್ದಾನೆ. ಇನ್ನು ನಾನು ಬದುಕಿರಲಾರೆ ಎಂದು ಇತ್ತೀಚಿಗೆ ತವರು ಮನೆಗೆ ತೆರಳಿ ತಾಯಿ ಬಳಿ ಹೇಳಿ ಕಣ್ಣಿರಿಟ್ಟಿದ್ದಳು. ಪತಿ ರಾಜಕೀಯ ನಾಯಕನಾಗಿದ್ದರಿಂದ ಜಗಳ ಮಾಡದೆ ಹೊಂದಣಿಕೆಯಿಂದ ಇರುವಂತೆ ಸಲಹೆ ನೀಡಿ ಆಕೆಯನ್ನು ವಾಪಸ್ಸು ಕಳುಹಿಸಿದ್ದರು.
ಆದರೆ, ಇದರಿಂದ ತೀವ್ರವಾಗಿ ಮನನೊಂದ ಯುವತಿ ಎಲ್ಲರ ಸಮ್ಮುಖದಲ್ಲೇ ಕೀಟನಾಶಕ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ. ಮೃತಳ ಕುಟುಂಬಸ್ಥರು ಪತಿಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.






