ಮದರ್ ತೆರೆಸಾ ಪಿಯು ಕಾಲೇಜು ಶಂಕರನಾರಾಯಣ: ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ಸಾಧನೆ, ಪ್ರವೇಶಾತಿ ಪ್ರಾರಂಭ
Views: 11
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಪಿಯು ಕಾಲೇಜು ಮೌಲ್ಯಾಧಾರಿತ ಹಾಗೂ ಗುಣಮಟ್ಟ ಕೇಂದ್ರೀಕೃತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಬದಲಾಗುತ್ತಿರುವ ಸ್ಪರ್ಧಾತ್ಮಕ ಪರಿಸ್ಥಿತಿಗೆ ಹೊಂದಿಕೊಂಡ ಬೋಧನಾ ವಿಧಾನ, ಅನುಭವಿ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣದಿಂದ ಸಂಸ್ಥೆ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ PCMB ಹಾಗೂ PCMCs ಸಂಯೋಜನೆಗಳೊಂದಿಗೆ ಪಿಯು ಪಠ್ಯಕ್ರಮದ ಜೊತೆಗೆ JEE Mains, NEET ಮತ್ತು KCET ಪರೀಕ್ಷೆಗಳಿಗೆ ಸಮನ್ವಯಿತ ತರಬೇತಿ ನೀಡಲಾಗುತ್ತಿದೆ. ನಿಯಮಿತ ಅಭ್ಯಾಸ, ಪರೀಕ್ಷಾ ಸರಣಿಗಳು ಹಾಗೂ ಯಾವುದೇ ಒತ್ತಡವಿಲ್ಲದ ವೇಳಾಪಟ್ಟಿಯ ಪಾಲನೆಯೊಂದಿಗೆ ವೈಯಕ್ತಿಕ ಗಮನದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ವಿಶ್ಲೇಷಣಾತ್ಮಕ ಚಿಂತನೆ ಬೆಳೆಸಲಾಗುತ್ತಿದೆ.
ಪ್ರಾಂಶುಪಾಲರೂ ವಿಜ್ಞಾನ ವಿಭಾಗದ ಮುಖ್ಯಸ್ಥರೂ ಆಗಿರುವ ಎರಡು ದಶಕಗಳಿಗೂ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಅನುಭವ ಹೊಂದಿಕೊಂಡಿರುವ ಶ್ರೀ ಜೈಸನ್ ಬಿ. ಲೂಯಿಸ್ ಅವರ ನೇತೃತ್ವದಲ್ಲಿ ಬೋಧನಾ ವ್ಯವಸ್ಥೆಯಲ್ಲಿ ಹಲವು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ಅದರ ಜೊತೆಗೆ ಈ ಶೈಕ್ಷಣಿಕ ವರ್ಷದಿಂದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ವೇದಾಂತು ಇದರ ಸಹಯೋಗದೊಂದಿಗೆ ಪೂರಕ ಅಧ್ಯಯನ ವ್ಯವಸ್ಥೆ, ನಿರಂತರ ಮಾದರಿ ಪರೀಕ್ಷೆಗಳು ಹಾಗೂ ದಿನದ ಯಾವುದೇ ಸಮಯದಲ್ಲಿ ಸಂಶಯ ನಿವಾರಣೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಯ ಜೊತೆಗೆ ಹೆಚ್ಚುವರಿ ಮಾರ್ಗದರ್ಶನ ದೊರೆಯುತ್ತಿದೆ.
ಈ ಸಾಲಿನ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದ 110 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. 56 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದು, ಉಳಿದವರು ಉನ್ನತ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿ ಸಂಜನಾ 595 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ EBACs ಹಾಗೂ EBAS ಸಂಯೋಜನೆಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಉಪಪ್ರಾಂಶುಪಾಲರೂ ವಿಭಾಗದ ಮುಖ್ಯಸ್ಥರೂ ಆಗಿರುವ ಕುಮಾರಿ ಗೀತಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಅರ್ಹ ತರಬೇತಿಯ ಜೊತೆಗೆ ಸಾಧನೆಗೆ ಪ್ರೇರಣೆ ನೀಡಲಾಗುತ್ತಿದೆ.
ಈ ವರ್ಷದ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದ 65 ವಿದ್ಯಾರ್ಥಿಗಳಲ್ಲಿ 64 ಮಂದಿ ತಮ್ಮ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಮೀರಿಸಿರುವುದು ವಿಶೇಷ ಸಾಧನೆ. 36 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದು, ಉಳಿದವರು ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಅಮೂಲ್ಯಾ 595 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.ಇದಲ್ಲದೆ ಸಿಎ, ಸಿಎಸ್ ಹಾಗೂ ಸಿಎಮ್ಎ ಫೌಂಡೇಶನ್ ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದು, ಕಳೆದ ವರ್ಷ ಹಾಜರಾದವರಲ್ಲಿ ಬಹುಪಾಲು ಮಂದಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿರುವುದು ಸಂಸ್ಥೆಯ ತರಬೇತಿಯ ಪರಿಣಾಮಕಾರಿತ್ವವನ್ನು ತೋರಿಸುತ್ತದೆ.
ಪಠ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ವಿಕಸನಕ್ಕೆ ಆದ್ಯತೆ ನೀಡಲಾಗುತ್ತಿದೆ.
ಇಲ್ಲಿ ಬಾಹ್ಯ ಹೋಲಿಕೆಗಿಂತ, ಸಂಸ್ಥೆಯದೇ ಹಿಂದಿನ ಸಾಧನೆಗಳನ್ನು ಮೀರಿಸುವುದು ಮುಖ್ಯ ಗುರಿಯಾಗಿದ್ದು, ಪ್ರತಿಯೋರ್ವ ವಿದ್ಯಾರ್ಥಿಗೆ ವೈಯಕ್ತಿಕ ಗಮನ ನೀಡುವ ಮೂಲಕ ಅವರ ಸಾಮರ್ಥ್ಯವನ್ನು ಹೊರತೆಗೆದು ಅವರನ್ನು ಉನ್ನತ ಮಟ್ಟಕ್ಕೆ ತಲುಪಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ.
ನಿರಂತರ ಮಾರ್ಗದರ್ಶನ, ಕ್ರಮಬದ್ಧ ತರಬೇತಿ ಮತ್ತು ಸ್ಥಿರ ಫಲಿತಾಂಶಗಳ ಮೂಲಕ ಈ ಸಂಸ್ಥೆ ಪ್ರದೇಶದ ಪ್ರಮುಖ ಪಿಯು ಕಾಲೇಜುಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2026-27ರ ಶೈಕ್ಷಣಿಕ ವರ್ಷದಲ್ಲಿ ಇನ್ನಷ್ಟು ಶ್ರೇಷ್ಠ ಫಲಿತಾಂಶಗಳತ್ತ ದಿಟ್ಟ ಹೆಜ್ಜೆ ಇಡುವುದಾಗಿ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉನ್ನತ ಶೇಕಡಾವಾರು ಸಾಧನೆಗಳ ಜೊತೆಗೆ JEE 100 ಪರ್ಸೆಂಟೈಲ್ ಸಾಧಕರನ್ನು ರೂಪಿಸುವ ಗುರಿಯನ್ನು ಹೊಂದಿದೆ.
ಇದೀಗ 2026–27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆಯಲು ಆಹ್ವಾನಿಸಲಾಗಿದೆ.






