ಇತರೆ

ಗಣಿಗಾರಿಕೆ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು ಕಾರ್ಮಿಕರು ಸಾವು 

Views: 25

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಸಮೀಪ ಕಲ್ಲು ಗಣಿಗಾರಿಕೆ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು  ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ.

ಜಾರ್ಖಂಡ ಮೂಲದ ರವಿಕುಮಾರ ಸಿಂಗ್ (18) ಹಾಗೂ ಸುಭಾಷ ಸಿಂಗ್ (18) ಎಂದು ಗುರುತಿಸಲಾಗಿದೆ.

ಕಲ್ಯಾಣ ಶೆಟ್ಟಿ ಅಸೋಸಿಯೇಷನ್‌ಗೆ ಸೇರಿದ ಗಣಿಗಾರಿಕೆ ಪ್ರದೇಶದಲ್ಲಿಗಣಿಗಾರಿಕೆ ಕಾರ್ಯಕ್ಕಾಗಿ ಪಡೆದಿದ್ದ 11 ಕೆವಿ ವಿದ್ಯುತ್ ಸಂಪರ್ಕದ ಸಮೀಪ ಹಿಟ್ಯಾಚ್ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದ ವೇಳೆ, ಯಂತ್ರದ ಬಕೆಟ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ದುರಂತ ಸಂಭವಿಸಿದೆ.

ವಿದ್ಯುತ್ ತಗುಲುತ್ತಿದ್ದಂತೆಯೇ ಪ್ರಾಣ ಉಳಿಸಿಕೊಳ್ಳಲು ಜೆಸಿಬಿಯಿಂದ ಕೆಳಗೆ ಜಿಗಿದ ಕಾರ್ಮಿಕರು ಹತ್ತಿರದಲ್ಲಿದ್ದ ನೀರಿಗೆ ಬಿದ್ದಿದ್ದಾರೆ. ಆದರೆ ನೀರಿನಲ್ಲೂ ವಿದ್ಯುತ್ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related Articles

Back to top button
error: Content is protected !!