ಇತರೆ
ಕಾಲೇಜಿಗೆ ಹೋಗ್ತೀನಿ ಎಂದು ಪ್ರಿಯಕರನ ಜೊತೆ ಓಯೋ ರೂಮಿಗೆ ಹೋದ ಮಗಳು! ತಾಯಿ ಮಗಳ ಜಟಾಪಟಿ ವಿಡಿಯೋ ವೈರಲ್
Views: 109
ಕನ್ನಡ ಕರಾವಳಿ ಸುದ್ದಿ:ಮಗಳು ಪ್ರಿಯಕರನೊಂದಿಗೆ ಹೊಟೇಲ್ ರೂಮ್ ನಲ್ಲಿದ್ದಾಗ ತಾಯಿ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತಾಯಿ, ಮಗಳ ಈ ಜಟಾಪಟಿ ವಿಡಿಯೋವನ್ನು ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈಗ ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ಈ ವಿಡಿಯೋ ಎಲ್ಲಡೆ ಹರಿದಾಡುತ್ತಿದಂತೆ, ನೆಟ್ಟಿಗರು ತಮ್ಮ ಕೈಗೆ ಕೆಲಸ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದರೆ ಗೊತ್ತಾಗುತ್ತೆ, ಇದು ಪ್ರೀ-ಫ್ಲ್ಯಾನ್ಸ್ ಎಂದು ಒಬ್ಬ ಬಳಕೆದಾರ ಹೇಳಿದರೆ, ಓ.. ನೈಸ್ ಸ್ಕ್ರಿಪ್ಟ್ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನೂ ಕೆಲವರು ಈ ವಿಡಿಯೋಗೆ ಸಹಾನುಭೂತಿ ಸೂಚಿಸುತ್ತಾ, ನೋಡಿ ನಿಮ್ಮ ಮಕ್ಕಳ ಮೇಲೆ ಒಂದು ಕಣ್ಣನ್ನು ಯಾವತ್ತು ಇಟ್ಟಿಡಿ, ಅವರು ಎಲ್ಲಿಗೆ ಹೋಗುತ್ತಾರೆ? ಯಾರೊಂದಿಗೆ ಇರುತ್ತಾರೆ ಎಂದು ಪಾಲಕರಾದ ನಿಮಗೆ ತಿಳಿದಿರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ,






