ಬೈಂದೂರು: ಲಾರಿ-ಕಾರು ನಡುವೆ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು
Views: 191
ಕನ್ನಡ ಕರಾವಳಿ ಸುದ್ದಿ: ಬೈಂದೂರು ಸಮೀಪ ನಾವುಂದದಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ.28ರಂದು ಸಂಭವಿಸಿದೆ.
ಬೆಂಗಳೂರು ನೆಲಮಂಗಲ ನಿವಾಸಿಗಳಾದ ಮಮತ (36), ದೃತಿಕಾ (14) ಮೃತ ಪಟ್ಟವರು.
ರಾಘು (40), ಜಾನ್ವಿ (12), ಚಾರ್ವಿ (10) ಕಿರಣ್ ಗಾಯಗೊಂಡವರು.
ಬೆಂಗಳೂರು ನೆಲಮಂಗಲ ನಿವಾಸಿಗಳಾದ ಅವರು ಶನಿವಾರ ಬೆಳಗ್ಗೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ನಾವುಂದ ರಾಷ್ಟ್ರೀಯ. ಹೆದ್ದಾರಿ 66ರಲ್ಲಿ ಬರುವಾಗ ರಸ್ತೆ ಬದಿಯಲ್ಲಿ ನಿಂತಿರುವ ಲಾರಿಗೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಮಮತಾ ಮತ್ತು ಧೃತಿಕಾ ಕಾರಿನಿಂದ ಹೊರಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಉಳಿದವರನ್ನು ಕುಂದಾಪುರ, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರ ದರ್ಶನ ಮುಗಿಸಿ ಬರುವಾಗ ಸಂಭವಿಸಿದ ದುರಂತ:
ಕಿರಣ್ ಹಾಗೂ ರಾಘು ಇಬ್ಬರೂ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗಿಗಳಾಗಿದ್ದು, ರಜೆ ನಿಮಿತ್ತ ಪ್ರವಾಸಕ್ಕೆ ಬಂದಿದ್ದರು. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ನಂತರ ಮುರುಡೇಶ್ವರ ದೇವಸ್ಥಾನದ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.






