ಮುಚ್ಚುವ ಸ್ಥಿತಿಯಲ್ಲಿದ್ದ ಬೋರ್‌ವೆಲ್ ನಿಂದ ಹೊರಬರುವ ಅನಿಲ ಬಳಸಿ ಅಡುಗೆ ತಯಾರಿ!.. ಹೇಗೆ?
Views: 55
ಕನ್ನಡ ಕರಾವಳಿ ಸುದ್ದಿ:ಇದೇನಪ್ಪಾ ಬೋರ್‌ವೆಲ್ ನಿಂದ ಹೊರಬರುವ ನೈಸರ್ಗಿಕ ಅನಿಲ ಬಳಸಿ ಅಡುಗೆ ತಯಾರಿನಾ? ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು, ಇದೊಂದು ಕೆರಳದಲ್ಲಿರೊ ಕುಟುಂಬದ ಮನೆಯ ಕಥೆ. ಈ ಕುಟುಂಬ 2011ರಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಬೋರ್‌ವೆಲ್ ತೋಡಿಸಿತ್ತು. ಆದರೆ 75 ಅಡಿ ತೋಡಿದರೂ ಶುದ್ಧ ನೀರು ಸಿಗದೆ, ಕೆಸರು ನೀರು ಮಾತ್ರವೇ ಬರುತ್ತಿದ್ದ ಪರಿಣಾಮ ಬಾವಿಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿತ್ತು
ಪೈಪ್ ಮುಚ್ಚುವ ಸಮಯದಲ್ಲಿ ಯಾರೋ ಬೆಂಕಿಕಡ್ಡಿ ಹಚ್ಚುತ್ತಿದ್ದಂತೆ ಬಾವಿಯಿಂದ ಏಕಾಏಕಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿತ್ತು. ಖರ್ಚು ಮಾಡಿದ ಹಣ ವ್ಯರ್ತವಾಗಬಾರದೆಂದು ಮನೆಯೊಡತಿ ರೆತ್ನಮ್ಮ ಬೋರ್‌ವೆಲ್ ನಿಂದ ಹೊರಬರುವ ಅನಿಲವನ್ನು ನೇರವಾಗಿ ಅಡುಗೆ ಮನೆಗೆ ಲಿಂಕ್ ಮಾಡಿದರು. ಹೀಗೆ ಬಂದ ಗ್ಯಾಸ್ ನಿಂದ ಅವರು ಮೊದಲಿಗೆ ಕಾಫಿ ಮಾಡಿ ನೋಡಿದರು.
ರುಚಿಯಲ್ಲಿ ವ್ಯತ್ಯಾಸ ಕಾಣದೆ ಇರುವ ಪರಿಣಾಮ ಅದರಲ್ಲೇ ಅಡುಗೆ ತಯಾರಿಸುವ ನಿರ್ಧಾರ ತೆಗೆದುಕೊಂಡು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ಅಡುಗೆಗಾಗಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಅವಲಂಬಿಸದೇ ಬದುಕುತಿದ್ದಾರೆ.






