ಇತರೆ

ಕುಂದಾಪುರ:ಮಳಿ ಚಿಪ್ಪು ಹೆಕ್ಕುವಾಗ ನೀರಲ್ಲಿ ಮುಳುಗಿ ಯುವಕ ಸಾವು

Views: 38

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸಮೀಪ ಅರಾಟೆ ಸೇತುವೆ ಬಳಿ, ಸೌಪರ್ಣಿಕಾ ನದಿಯಲ್ಲಿ ಮಳಿ ಚಿಪ್ಪು ಹೆಕ್ಕಲು ಹೋದ ಹಂಗಳೂರಿನ ಚಂದ್ರ (39) ಅವರು ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಚಂದ್ರ ಹಾಗೂ ಅವರ ಭಾವ ಅಜಿತ್ ಅವರು ಅರಾಟೆ ಸೇತುವೆ ಬಳಿ ಮಳಿ ಹೆಕ್ಕಲು ಹೋಗಿದ್ದರು. ನೀರಿಗೆ ಇಳಿದ ಸ್ವಲ್ಪ ಸಮಯದ ನಂತರ ಚಂದ್ರ ಅವರು ಕಾಣದೇ ಇದ್ದು, ಹುಡುಕಾಟ ನಡೆಸಲಾಗಿದೆ. ಮರುದಿನ ಬೆಳಗ್ಗೆ ಅರಾಟೆ ಸೇತುವೆ ಬಳಿಯ ನದಿಯಲ್ಲಿ ಚಂದ್ರ ಅವರ ಮೃತದೇಹ ಪತ್ತೆಯಾಗಿದೆ. ತಂಗಿ ಗೌರಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!