ದಾಂಪತ್ಯ ಕಲಹ: ಪತ್ನಿಯನ್ನು ಇರಿದು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ
Views: 34
ಕನ್ನಡ ಕರಾವಳಿ ಸುದ್ದಿ :ದಾಂಪತ್ಯ ಕಲಹ ದುರಂತ ಅಂತ್ಯ ಕಂಡ ದಾರುಣ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲ ಎಂಬಲ್ಲಿ ಇಂದು (ಮಾ.20) ಬೆಳಿಗ್ಗೆ ಸಂಭವಿಸಿದೆ.
ಗಂಡ-ಹೆಂಡತಿಯ ನಡುವಿನ ಜಗಳದ ಮಧ್ಯೆ ಹೆಂಡತಿ ಕೊಲೆಯಾಗಿದ್ದು, ಬಳಿಕ ಗಂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಮೃತ ಮಹಿಳೆಯನ್ನು ಕುಮಾರಮಂಗಲ ಮೂಲದ ಸಾವಿತ್ರಿ (42) ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಎಮೆಟ್ಟಿ ನಿವಾಸಿ ಪುರುಷೋತ್ತಮ ಅಲಿಯಾಸ್ ಬೈರಪ್ಪ ಎಂದು ಗುರುತಿಸಲಾಗಿದೆ. ದಂಪತಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ಪುರುಷೋತ್ತಮ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ
ಪತಿ ಮತ್ತು ಪತ್ನಿ ನಡುವೆ ನಡೆದ ತೀವ್ರ ವಾಗ್ವಾದವು ಹಿಂಸಾತ್ಮಕ ತಿರುವು ಪಡೆದು, ಪತಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆಯ ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಿನ್ನೆಲೆ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ. ತನಿಖೆ ಮುಂದುವರಿದಿದೆ.






