ಇತರೆ

ರಾತ್ರಿ ಮಲಗಿದ ಕೊಠಡಿಯಲ್ಲಿ ಕೆಮಿಕಲ್ ರಿಯಾಕ್ಷನ್:ನಾಲ್ವರು ಕಾರ್ಮಿಕರು ಆಸ್ಪತ್ರೆಗೆ ದಾಖಲು

Views: 11

ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿ ದೇಶಪಾಂಡೆ ನಗರದ ಖಾಸಗಿ ಕಟ್ಟಡವೊಂದರಲ್ಲಿ ರಾಸಾಯನಿಕದ ದುಷ್ಪರಿಣಾಮದಿಂದ ನಾಲ್ವರು ಕಾರ್ಮಿಕರು ಅಸ್ವತ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ನಡೆದಿದೆ.

ಬೆಂಗಳೂರಿನ ಮಾಗಡಿ ನಿವಾಸಿಗಳಾದ ಜಾಫರ್, ಅಮ್ಮದ್, ಜಬಿ ಹಾಗೂ ಹೈದರ್ ಎಂಬ ಕಾರ್ಮಿಕರು ಅಸ್ವಸ್ಥ ಗೊಂಡವರು. ಎಲ್‌ಇಡಿ ಸಂಬಂಧಿಸಿದ ಕೆಲಸಕ್ಕೆ ಕಳೆದ 10 ದಿನದ ಹಿಂದೆ ನಗರಕ್ಕೆ ಆಗಮಿಸಿದ್ದರು. ಸೋಮವಾರ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ.

ಮಲಗಿದ ಕೊಠಡಿಯಲ್ಲಿ ರಸಾಯನಿಕ ವಸ್ತುಗಳಿದ್ದು, ಸರಿಯಾಗಿ ಹವಾನಿಯಂತ್ರಣ ವಿಲ್ಲದ ಕಾರಣ ನಾಲ್ವರು ಬೆಳಿಗ್ಗೆ ಅಸ್ತವ್ಯಸ್ತಗೊಂಡಿದ್ದರು ಎಂದು ಪೊಲೀಸರು ತಿಳಿಸಿದರು. ಕಳೆದ 10 ದಿನ ಹಿಂದೆ ಬೆಂಗಳೂರಿನಿಂದ ಹುಬ್ಬಳ್ಳಿ ಎಲ್ ಇಡಿ ವಿದ್ಯುತ್ ದೀಪದ ಕೆಲಸಕ್ಕೆ ಬಂದಿದ್ದಾರೆ. ಬೆಳಿಗ್ಗೆ ಅಸ್ವಸ್ಥಗೊಂಡ ಅವರನ್ನು ನಮ್ಮ ಸಿಬ್ಬಂದಿ ನಗರದ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ ತಿಳಿಸಿದ್ದಾರೆ.

ಘಟನೆಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಫುಡ್ ಪಾಯಿಜನ್ ಆಗಿರಬಹುದು ಅಥವಾ ಕೆಮಿಕಲ್ ರಿಯಾಕ್ಷನ್ ಇರಬಹುದು ಎಂದು ಹೇಳಲಾಗಿದೆ. ಹೆಚ್ಚಿನ ತನಿಖೆಯಿಂದ ಏನಾಗಿದೆ ಎಂಬುವುದು ತಿಳಿದು ಬರಲಿದೆ ಎಂದರು.

Related Articles

Back to top button
error: Content is protected !!