ಇತರೆ

ಕುಂದಾಪುರ:ಕುಂದಬಾರಂದಾಡಿ ರೈಲು ಸೇತುವೆ ಬಳಿ ಬಾಲಕನ ಶವ ಪತ್ತೆ!

Views: 79

ಕನ್ನಡ ಕರಾವಳಿ ಸುದ್ದಿ: ಕುಂದಬಾರಂದಾಡಿ ಗ್ರಾಮದ ತೊರೊಳ್ಳಿ ರೈಲು ಸೇತುವೆ ಬಳಿ ಬಾಲಕನೊಬ್ಬ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕುಂದಬಾರಂದಾಡಿ ಗ್ರಾಮದ ಚಕ್ರ ಸೇತುವೆಯ ಬಳಿ ಇರುವ ತೊರೊಳ್ಳಿ ರೈಲು ಸೇತುವೆ ಮೇಲೆ ಟ್ರ್ಯಾಕ್ ಸಮೀಪ ಒಬ್ಬ ಹುಡುಗ ಮೃತ ಸ್ಥಿತಿಯಲ್ಲಿ ಇದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಮಾಹಿತಿ ಪಡೆದ ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಬಾಲಕನೊಬ್ಬ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದು, ಮುಖ ಹಾಗೂ ತಲೆಯ ಎಡಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಬಲ ಕಾಲಿನ ಪಾದ ತುಂಡಾಗಿರುವುದು ಕಂಡುಬಂದಿದೆ.

ಮೃತ ಬಾಲಕನ ಪ್ಯಾಂಟ್ ಕಿಸೆ ಪರಿಶೀಲಿಸಿದಾಗ, ಆತನ ಹೆಸರು ರಂಗಬಾಜ್ ಅನ್ಸಾರಿ (16), ಜಾರ್ಖಂಡ್ ಮೂಲದವನು ಎಂಬುದು ತಿಳಿದುಬಂದಿದೆ. ಪ್ರಾಥಮಿಕವಾಗಿ, ಜಾರ್ಖಂಡ್‌ನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಂದಬಾರಂದಾಡಿ ಗ್ರಾಮದ ತೊರೊಳ್ಳಿ ಭಾಗದಲ್ಲಿ ರೈಲು ಸಂಚರಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!