ಶಿಕ್ಷಣ
ಶಾಲಾ ಬಾಲಕಿಗೆ ನಾಗರಹಾವು ಕಡಿತ, ವಿಷವನ್ನು ಬಾಯಿಂದ ಹೀರಿ ವಿದ್ಯಾರ್ಥಿಯನ್ನು ರಕ್ಷಿಸಿದ ಶಿಕ್ಷಕನ ಸ್ಥಿತಿ ಗಂಭೀರ!
Views: 76
ಕನ್ನಡ ಕರಾವಳಿ ಸುದ್ದಿ: ಎಂದಿನಂತೆ ಮುಂಜಾನೆ ಶಾಲೆಗೆ ಬಂದಿದ್ದ ಒಂದನೇ ತರಗತಿ ವಿದ್ಯಾರ್ಥಿನಿ ಸೃಷ್ಠಿ ಎಂಬ ಬಾಲಕಿಗೆ ಶಾಲಾ ಮೈದಾನದಲ್ಲಿ ವಿಷಕಾರಿ ನಾಗರ ಹಾವೊಂದು ಕಚ್ಚಿದ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ.
ಬಾಲಕಿ ನೋವಿನಿಂದ ಅಳುತ್ತಾ ಕಿರುಚಾಡುತ್ತಿದ್ದಂತೆ ಸ್ಥಳಕ್ಕೆ ಬಂದ ಶಿಕ್ಷಕರಿಗೆ ಹಾವು ಕಚ್ಚಿರುವುದು ಗೊತ್ತಾಗಿದೆ.ಬಾಲಕಿಯ ದೇಹಕ್ಕೆ ವಿಷ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿದ ಶಿಕ್ಷಕ ರವಿಶಂಕರ್, ಆಸ್ಪತ್ರೆಗೆ ಹೊಗಲು ಸಮಯವಾಗುತ್ತದೆ ಎಂದು ತಕ್ಷಣವೇ ಹಾವು ಕಚ್ಚಿದ ಜಾಗದಿಂದ ವಿಷವನ್ನು ತನ್ನ ಬಾಯಿಯಿಂದ ಹೀರಿ ವಿಷ ತೆಗೆದಿದ್ದಾರೆ. ಬಾಲಕಿಯ ದೇಹದಲ್ಲಿದ್ದ ಬಹುತೇಕ ವಿಷವನ್ನು ಹೊರಹಾಕುವ ಮೂಲಕ ಪ್ರಥಮ ಚಿಕಿತ್ಸೆ ನೀಡಿದ್ದು, ವಿಷವು ಬಾಲಕಿಯ ಹೃದಯಕ್ಕೆ ಹರಡದಂತೆ ತಡೆದು ಆಕೆಯ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಶಾಲಾ ಶಿಕ್ಷಕರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.






