ಕರಾವಳಿ

ಉಡುಪಿ ಜಿಲ್ಲೆಯ ಇಬ್ಬರು ರೌಡಿಶೀಟರ್ ಸಹಿತ ಮೂವರಿಗೆ ಗಡಿಪಾರು ಆದೇಶ

Views: 92

ಕನ್ನಡ ಕರಾವಳಿ ಸುದ್ದಿ:ಉಡುಪಿ ಜಿಲ್ಲೆಯ ಇಬ್ಬರು ರೌಡಿಶೀಟರ್ ಸಹಿತ ಮೂವರು ಆರೋಪಿಗಳನ್ನು ಗಡಿಪಾರು ಮಾಡಿ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮಾ.12ರಂದು ಆದೇಶ ಹೊರಡಿಸಿದ್ದಾರೆ.

ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ನಿವಾಸಿ ಸಂದೇಶ ನಾಯ್ಕ ಹಿರಿಯಡಕ ಪಾಪುಜೆ ದರ್ಖಾಸು ನಿವಾಸಿ ಸುಶಾಂತ್ ಪೂಜಾರಿ ಹಾಗೂ ಪಡುಬಿದ್ರಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ನಾಲು ಗ್ರಾಮದ ಜಬ್ಬಾರ್ ಹುಸೇನ್ ಗಡಿಪಾರುಗೊಂಡ ಆರೋಪಿಗಳು.

ಜಬ್ಬಾರ್ ಹುಸೈನ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಂಗಳೂರ ನಗರದಲ್ಲಿ ಈವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಸಂದೇಶ ವಿರುದ್ಧ ಐದು ಪ್ರಕರಣ ದಾಖಲಾಗಿದ್ದು, ರೌಡಿ ಶೀಟರ್ ತೆರೆಯಲಾಗಿದೆ. ಅದೇ ರೀತಿ ಸುಶಾಂತ್ ಪೂಜಾರಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.

ಜಬ್ಬಾರ್ ಹುಸೇನ್‌ನನ್ನು ಹಾಸನ ಜಿಲ್ಲೆಯ ಪೆನ್ನನ್ ಮೊಹಲ್ಲಾ ಠಾಣಾ ವ್ಯಾಪ್ತಿಗೆ, ಸಂದೇಶ್‌ ನಾಯ್ಕನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಹಾಗೂ ಸುಶಾಂತ್ ಪೂಜಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್‌ ಅಧೀಕ್ಷಕ ಹರಿರಾಂ ಶಂಕ‌ರ್ ತಿಳಿಸಿದ್ದಾರೆ.

Related Articles

Back to top button
error: Content is protected !!