ಯುವಜನ

ಕುಂದಾಪುರ: ಹರ್ಕೂರು ಕಟ್ಟಿನಮಕ್ಕಿಯ ಯುವಕ ಹಠಾತ್ ಕುಸಿದು ಬಿದ್ದು ಸಾವು 

Views: 157

ಕನ್ನಡ ಕರಾವಳಿ ಸುದ್ದಿ: ಹರ್ಕೂರು ಕಟ್ಟಿನಮಕ್ಕಿಯ ವ್ಯಕ್ತಿಯೊಬ್ಬ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಶಶಿಧರ ದೇವಾಡಿಗ (25) ಮೃತಪಟ್ಟ ಯುವಕ

ಬಿಬಿಎ ವ್ಯಾಸಂಗ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ 4 ವರ್ಷಗಳಿಂದ ವರ್ಕ್ ಫ್ರಮ್ ಹೋಮ್ ನಿಂದ ಊರಲ್ಲಿಯೇ ಇದ್ದರು.

ಮಾ.11 ರ ಸಂಜೆ 6.40 ರ ಸುಮಾರಿಗೆ ಮನೆಯ ಸಿಟೌಟ್ ನಲ್ಲಿ ಕುಳಿತಿದ್ದ ಶಶಿಧ‌ರ್ ಅವರು ಮನೆಯ ಹಿಂಭಾಗದ ಸ್ನಾನ ಗೃಹಕ್ಕೆ ಹೋಗುವಾಗ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅಜ್ಜಿ ಅಕ್ಕಯ್ಯ ಅವರು ಆರೈಕೆ ಮಾಡಿದ್ದು, ಆಗ ತನಗೆ ಉಸಿರು ಕಟ್ಟುತ್ತಿದೆಯೆಂದು ಎದೆ ಹಿಡಿದುಕೊಂಡು ನರಳಾಡಿದರು. ಕೂಡಲೇ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ, ಪರೀಕ್ಷಿಸಿದ ವೈದ್ಯರು ಪ್ರಾಥಮಿಕ  ಚಿಕಿತ್ಸೆ ನೀಡಿದ್ದಾರೆ. ಆದರೆ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿ, ಮೃತರ ತಂದೆ ಸದಾಶಿವ ಕೆ. ಉಳ್ಳೂರು 11 ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!