ಇತರೆ

ಭಾಗಮಂಡಲ ಜೋಡಿ ಕೊಲೆ: ತಂಗಿಯ ಅನೈತಿಕ ಸಂಬಂಧವೇ ಕೊಲೆಗೆ ಕಾರಣ, ಆರೋಪಿ ತಪ್ರೊಪ್ಪಿಗೆ 

Views: 104

ಕನ್ನಡ ಕರಾವಳಿ ಸುದ್ದಿ: ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಚೇರಿ ಗ್ರಾಮದಲ್ಲಿ ಬುಧವಾರ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಚೇರಿ ನಿವಾಸಿ ಹೆಚ್.ಕೆ.ಚಂದು (64) ಎಂಬಾತನೇ ಬಂಧನಕ್ಕೊಳಗಾದ ಆರೋಪಿಯಾಗಿದ್ದು, ತನ್ನ ತಂಗಿಗೆ ಇದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಆರೋಪಿ ತಪ್ರೊಪ್ಪಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆ‌ರ್.ಎನ್‌.ಬಿಂದುಮಣಿ ತಿಳಿಸಿದ್ದಾರೆ.

ಕುಂದಚೇರಿ ಗ್ರಾಮದ ಅಡಿಯರ ಯಶೋದಾ (45) ಹಾಗೂ ಕುಂಣಿರಾಮ (47) ಎಂಬವರ ನಡುವೆ ಕಳೆದ ಎರಡು ವರ್ಷಗಳಿಂದ ಅನೈತಿಕ ಸಂಬಂಧವಿತ್ತೆಂದು ಹೇಳಲಾಗಿದ್ದು, ಈ ಸಂಬಂಧ ಯಶೋದಾಳ ಅಣ್ಣಚಂದುವಿಗೆ ಅಸಮಾಧಾನವಿತ್ತೆನ್ನಲಾಗಿದೆ.

ಬುಧವಾರ ಸಂಜೆ ಈ ವಿಚಾರವಾಗಿ ಚಂದ್ರು ತನ್ನ ತಂಗಿ ಯಶೋದಾ ಹಾಗೂ ಕುಂಣಿರಾಮ ಅವರೊಂದಿಗೆ ಜಗಳವಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಚಂದ್ರು ಕತ್ತಿಯಿಂದ ಕಡಿದು ಇಬ್ಬರನ್ನೂ ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Related Articles

Back to top button
error: Content is protected !!