ಇತರೆ

ಕುಂದಾಪುರ: ತೆಕ್ಕಟ್ಟೆಯಲ್ಲಿ ಜುಗಾರಿ ಅಡ್ಡೆಗೆ ಪೊಲೀಸರಿಂದ ದಾಳಿ! 

Views: 112

ಕನ್ನಡ ಕರಾವಳಿ ಸುದ್ದಿ: ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಎಸ್.ಪಿ ಕ್ರಿಯೇಷನ್ ಕ್ಲಬ್ ಜುಗಾರಿ ಅಡ್ಡೆಯ ಮೇಲೆ ಕೋಟ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು.

ಮಾರ್ಚ್ 10 ರಂದು ಸಾಯಂಕಾಲ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದರು.

ದಾಳಿಯ ವೇಳೆ ಆರೋಪಿಗಳಾದ ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಭಾಕರ, ಸದಾಶಿವ, ಜಯರಾಜ್ ಶೆಟ್ಟಿ, ಆನಂದ ಮತ್ತು ಹರೀಶರನ್ನು ಬಂಧಿಸಲಾಗಿದೆ.

ಸ್ಥಳದಿಂದ ₹65,664 ನಗದು ಹಣ, ಕಾಯಿನ್‌ಗಳು, 10 ಮೊಬೈಲ್ ಫೋನ್‌ಗಳು, 31 ಪ್ಲಾಸ್ಟಿಕ್ ಕುರ್ಚಿಗಳು, ಒಂದು ದೊಡ್ಡ ರೌಂಡ್ ಟೇಬಲ್, ಒಂದು ಸಣ್ಣ ರೌಂಡ್ ಟೇಬಲ್, ಕ್ಲಬ್‌ನ ಸಿಸಿ ಕ್ಯಾಮೆರಾ ಡಿವಿಆರ್, ಎರಡು ಲೆಜ್ಜರ್ ಪುಸ್ತಕಗಳು ಹಾಗೂ KA-20-ER-3444 ಸಂಖ್ಯೆಯ ಟಿವಿಎಸ್ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Related Articles

Back to top button
error: Content is protected !!