ಶಿಕ್ಷಣ

ವಕ್ವಾಡಿ ಗುರುಕುಲದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Views: 59

ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ,  ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಚರಿಸಲ್ಪಟ್ಟ ಈ ಮಹಿಳಾ ದಿನಾಚರಣೆಯು ಭಾರತದಲ್ಲೂ ಇಂದು ವಿಶೇಷವಾಗಿ ಆಚರಿಸಲ್ಪಡುತ್ತಿದೆ. ಸಾವಿತ್ರಿ ಪುಲೆ, ಡಾ.ಆನಂದಿಬಾಯಿ, ಇಂದಿರಾ ಗಾಂಧಿಯ ನಂತಹ ಧೀಮಂತ ಮಹಿಳೆಯರು ಈ ದೇಶಕ್ಕೆ ವಿಶೇಷ ಕೊಡುಗೆಯನ್ನಿತ್ತಿದ್ದಾರೆ. ಮಹಿಳೆ ತನ್ನ ಮನೆ ಮತ್ತು ತನ್ನ ಸುತ್ತಲಿನ ಸಮಾಜವನ್ನು ಕಟ್ಟಲು ಎಚ್ಚರದಿಂದ ಹೆಜ್ಜೆ ಇಡಬೇಕು. ತಮ್ಮ ಮಕ್ಕಳಿಗೆ ಮೊದಲು ಗುರು ತಾಯಿಯೇ ಆದ್ದರಿಂದ ಹೊಣೆಯರಿತು ನಡೆಯಬೇಕೆಂದರು.

ಇದೇ ಸಂದರ್ಭದಲ್ಲಿ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನಜಂಟಿ ಕಾರ್ಯ ನಿರ್ನಾಹಕರಾದ ಶ್ರೀ ಕೆ.ಸುಭಾಶ್ಚಂದ್ರ .ಶೆಟ್ಟಿ ರವರು ಅಂತರಾಷ್ಟ್ರೀಯ ಮಹಿಳಾ ದಿನಚರಣೆಗೆ ಶುಭ ಕೋರುತ್ತಾ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯವಾದ ಸ್ಥಾನವಿದೆ. ಮಹಿಳೆಯನ್ನು ಗೌರವಿಸಿ ಆಧರಿಸಿ, ಸಮಾನ ಸ್ಥಾನ ನೀಡಬೇಕೆಂದರು. ಶಿಕ್ಷಕ ಶ್ರೀ ವೆಂಕಟೇಶ್ ಕವಿತೆ ವಾಚಿಸಿದರು. ಪ್ರಾಂಶುಪಾಲರಾದ ಡಾ. ರೂಪಾಶೆಣೈ ರವರು ಸರ್ವರನ್ನೂ ಸ್ವಾಗತಿ ಸಿದರೆ, ಶಿಕ್ಷಕಿ ಸಂಧ್ಯಾ ಪ್ರಾರ್ಥಿಸಿದರು. ಶಿಕ್ಷಕ ಗುರು ಎ೦. ಪಿ. ಕಾರ್ಯಕ್ರಮವನ್ನುನಿರೂಪಿಸಿ ವಂದಿಸಿದರು.

Related Articles

Back to top button
error: Content is protected !!