ಶಿಕ್ಷಣ

ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ 14 ವರ್ಷ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Views: 10

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ 14 ವರ್ಷ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ಮತ್ತು ಎರಡು ವರ್ಷದ ಪಿಯುಸಿ ಪಯಣಕ್ಕೆ ತೆರೆಯೆಳೆಯುವ ಸಂದರ್ಭದಲ್ಲಿ ಕಾರ್ಯಕ್ರಮವು ಆತ್ಮೀಯತೆಯಿಂದ ಮತ್ತು ಮುಂಬರುವ ದಿನಗಳಿಗೆ ಹೊಸ ಭರವಸೆ ಮೂಡಿಸುವ ರೀತಿಯಲ್ಲಿ ಜರುಗಿತು.

ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು ಶಿಕ್ಷಕರಿಗೆ ಹಾಗೂ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರು ಪರೀಕ್ಷೆ ಮತ್ತು ಭವಿಷ್ಯ ಜೀವನಕ್ಕಾಗಿ ಹಾರೈಕೆಗಳೊಂದಿಗೆ ಮಾರ್ಗದರ್ಶನ ನೀಡಿದರು.

ಎಲ್‌ಕೆಜಿ ಯಿಂದ ದ್ವಿತೀಯ ಪಿಯುಸಿಯವರೆಗೆ 14 ವರ್ಷಗಳ ಕಾಲ ಇದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮತ್ತು ಇದೇ ಸಂಸ್ಥೆಯಲ್ಲಿ 12 ಹಾಗೂ 13 ವರ್ಷಗಳ ನಿರಂತರ ಅಧ್ಯಯನ ಮಾಡಿದವರಿಗೂ ಗೌರವ ನೀಡಲಾಯಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ದ್ವಿತೀಯ ವಾಣಿಜ್ಯ ವಿಭಾಗದ ರಕ್ಷಿತಾ ಅವರಿಗೆ ವಿಶೇಷ ನಾಯಕತ್ವ ಪ್ರಶಸ್ತಿ ಪ್ರಧಾನಿಸಲಾಯಿತು.

ಪ್ರಾಂಶುಪಾಲರಾದ ಶ್ರೀ ಜೈಸನ್ ಲೂವಿಸ್, ವಾರ್ಷಿಕ ಪರೀಕ್ಷೆಯ ಬಗ್ಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕ ಅಂಶಗಳ ಕುರಿತು ವಿವರಿಸಿದರು.

ಸಂಸ್ಥಾಪಕದ್ವಯರಾದ ಕು. ಶಮಿತಾ ರಾವ್ ಹಾಗು ಕು. ರೆನಿಟಾ ಲೋಬೋ ಮಾತನಾಡಿ, ದೈಹಿಕ ಆರೋಗ್ಯ, ಮಾನಸಿಕ ಚಿಂತನೆ ಹಾಗೂ ಭಾವನೆಗಳ ಸಮತೋಲನ ಕಾಪಾಡಿಕೊಂಡು ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವಂತೆ ಹುರಿದುಂಬಿಸಿದರು.

ಅಭ್ಯಾಗತರೊಂದಿಗೆ ಉಪನ್ಯಾಸಕರೆಲ್ಲರೂ ದೀಪ ಬೆಳಗಿಸಿದರು, ಆ ದೀಪದ ಜ್ವಾಲೆಯಿಂದ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿದ್ದ ಪುಟ್ಟ ದೀಪವೊಂದನ್ನು ಹೊತ್ತಿಸಿಕೊಂಡು ಅಗ್ನಿಸಾಕ್ಷಿಯಾಗಿ ಮುಂದಿನ ಜೀವನದಲ್ಲಿ ತಾನೊಂದು ಜವಾಬ್ದಾರಿಯುತ ಪ್ರಜೆಯಾಗಿ, ಸಂಸ್ಥೆಗೆ, ತನ್ನ ಮನೆಗೆ, ತನ್ನ ಹಳ್ಳಿ, ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತರುವ ಕೆಲಸವನ್ನೇ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿದರು‌. ಗಣಿತ ಉಪನ್ಯಾಸಕರಾದ ಶ್ರೀ ಅಶ್ವಥ್ ಹಾಗೂ ತಂಡದವರ ಶುಭಾಶಯ ಗೀತೆಯೊಂದಿಗೆ ಕಾರ್ಯಕ್ರಮ ಭಾವನಾತ್ಮಕವಾಗಿ ಮುಕ್ತಾಯಗೊಂಡಿತು. ಉಪಪ್ರಾಂಶುಪಾಲರಾದ ಕುಮಾರಿ‌ ಗೀತಾ ಹಾಗೂ ಬೋಧಕ ಬೊಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಾಂಸ್ಕೃತಿಕ ಹಾಗೂ ಭಾಷಾ ಅಭಿವೃದ್ಧಿ ನಿರ್ದೇಶಕಿ ಕುಮಾರಿ ಅಲಿಟಾ ಡೇಸಾ ಅವರು ನೆರೆದವರನ್ನು ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button
error: Content is protected !!