ಯುವಜನ

ಕುಂದಾಪುರ :ಕೋಣೆಯಲ್ಲಿ ಶಾಲೆ ಮುಗಿಸಿ ಮನೆಗೆ ಬಂದ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವು 

Views: 407

ಕುಂದಾಪುರ: ಶಾಲೆ ಮುಗಿಸಿ ಮನೆಗೆ ಬಂದ 8ನೇ ತರಗತಿ  ವಿದ್ಯಾರ್ಥಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರ ಕೋಣಿ ಸಮೀಪ ನಡೆದಿದೆ.

ಕುಂದಾಪುರ ಕೋಣಿಯ ಅಗ್ನಿಶಾಮಕ ಠಾಣೆ ಬಳಿಯ ರಾಮಮಂದಿರ ದೇವಸ್ಥಾನದ ಸಮೀಪದ ನಿವಾಸಿ ಚಂದ್ರಶೇಖರ ಪೂಜಾರಿ ಹಾಗೂ ಸವಿತಾ ಎಂಬ ದಂಪತಿಗಳ ಎರಡನೇ ಪುತ್ರ ಮನಿಷ್ (14) ಮೃತಪಟ್ಟ ವಿದ್ಯಾರ್ಥಿ

ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮನೀಶ್ ಕಲಿಕೆಯಲ್ಲಿ ಬಹಳ ಮುಂದಿದ್ದ. ಗುರುವಾರ ಸಂಜೆ ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದಿದ್ದ ಮನೀಶ್ ಆವರಣವಿರುವ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ಘಟನೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಮನೀಷನ ತಂದೆ ಚಂದ್ರಶೇಖ‌ರ್ ಪೂಜಾರಿ ತಲ್ಲೂರಿನಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸಿ ಕುಟುಂಬ ಜೀವನ ಸಾಗಿಸುತ್ತಿದ್ದಾರೆ. ಮನೀಶ್ ನ ಅಣ್ಣ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!