ಇತರೆ
ಸಿದ್ದಾಪುರ:ತಂಗಿಯ ಮನೆಯಲ್ಲಿ ನೇಣಿಗೆ ಶರಣಾದ ಅಣ್ಣ
Views: 230
ಕನ್ನಡ ಕರಾವಳಿ ಸುದ್ದಿ: ತಂಗಿಯ ಮನೆಯಲ್ಲಿ ಅಣ್ಣನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನವೆಂಬರ್ 13ರಂದು ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಐರಬೈಲು ನಿವಾಸಿ ಬಸವ ಕುಲಾಲ (66) ಆತ್ಮಹತ್ಯೆ ಮಾಡಿಕೊಂಡವರು.
ಹಲವು ವರ್ಷಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ಬಸವ ಕುಲಾಲ್ ನ.13ರಂದು ಸಿದ್ದಾಪುರ ಐರಬೈಲಿನಲ್ಲಿರುವ ತನ್ನ ತಂಗಿಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುತ್ರ ಸಂತೋಷ ಕುಲಾಲ ಅವರು ನೀಡಿದ ದೂರಿನಂತೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






