ಇತರೆ

ಚರಂಡಿಯಲ್ಲಿ ತೇಲುತ್ತಿರುವ ವ್ಯಕ್ತಿಯ ಮೃತ ದೇಹ ಪತ್ತೆ 

Views: 122

ಕನ್ನಡ ಕರಾವಳಿ ಸುದ್ದಿ: ವಿಟ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಚರಂಡಿಯೊಂದರಲ್ಲಿ ಸೋಮವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಮೃತರನ್ನು ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ಮಂಜುನಾಥ (55) ಎಂದು ಗುರುತಿಸಲಾಗಿದೆ.

ಅಡಿಕೆ ಸಂಸ್ಕರಣೆ ಘಟಕವೊಂದರಲ್ಲಿ ಉದ್ಯೋಗಿಯಾಗಿದ್ದ ಮಂಜುನಾಥ ರವಿವಾರ ರಾತ್ರಿ 9:30ರ ಬಳಿಕ ನಾಪತ್ತೆಯಾಗಿದ್ದರು. ಸೋಮವಾರ ಬೆಳಿಗ್ಗೆ ಪಾದಚಾರಿಗಳು ಚರಂಡಿಯ ನೀರಲ್ಲಿ ಮೃತದೇಹವೊಂದು ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲಿಸದಾಗ ಅದು ಮಂಜುನಾಥ ಎಂದು ತಿಳಿದುಬಂದಿದೆ.ಆದರೆ, ಅವರು ಚರಂಡಿಗೆ ಬಿದ್ದು ಸಾವನ್ನಪ್ಪಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!