ಇತರೆ
ಇಂದು ಕುಂದಾಪುರಕ್ಕೆ ಓಯಾಸಿಸ್ – ಮುಕ್ತಿ ಬೈಕ್ ರ‍್ಯಾಲಿ
Views: 64
ಕನ್ನಡ ಕರಾಳಿ ಸುದ್ದಿ: ಓಯಾಸಿಸ್ – ಮುಕ್ತಿ ಬೈಕ್ ರ‍್ಯಾಲಿ -2025 ಈ ತಂಡ ಬೆಂಗಳೂರಿನಲ್ಲಿ ಕಾರ್ಯನಿರತರಾಗಿರುವ ಓಯಾಸಿಸ್ ಇಂಡಿಯಾ ಸ್ವಯಂಸೇವಾ ಸಂಸ್ಥೆಯು ಇಂದು(10/11/2025) ಸಂಜೆ 4:00ಗೆ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ, ಪಡಿ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ, SDMC ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ, ನಮ್ಮ ಪ್ರಗತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ( ರಿ) ಕಾಳಾವರ ಕುಂದಾಪುರ ತಾಲೂಕು, ಇವರುಗಳ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಮಾನವ ಕಳ್ಳ ಸಾಗಣೆ ತಡೆಯುವ ಮತ್ತು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತಾಗಿ ಜಾಗೃತಿ ಮೂಡಿಸುವ ಬೀದಿ ನಾಟಕದ ಪ್ರದರ್ಶನ ಮತ್ತು ಬೈಕ್ ರ‍್ಯಾಲಿ ಕಾರ್ಯಕ್ರಮ ನಡೆಯಲಿದೆ,







