ಇತರೆ
ಕುಂದಾಪುರ:ತಲ್ಲೂರು ಪೇಟೆಯಲ್ಲಿ ಹಾಡಹಗಲೇ ಕಾರಿನ ಗಾಜು ಒಡೆದು 2 ಲಕ್ಷ ರೂಪಾಯಿ ಕಳ್ಳತನ
Views: 105
ಕನ್ನಡ ಕರಾವಳಿ ಸುದ್ದಿ: ತಲ್ಲೂರು ಪೇಟೆಯಲ್ಲಿ ಹಾಡಹಗಲೇ ಕಾರಿನ ಕಿಟಕಿ ಗಾಜು ಒಡೆದು 2 ಲ. ರೂಪಾಯಿ ಕಳ್ಳತನ ನಡೆದ ಕುರಿತು ಪ್ರಕರಣ ದಾಖಲಾಗಿದೆ.
ಕೆಂಚನೂರು ಗ್ರಾಮದ ಕೆ. ಗುಂಡು ಶೆಟ್ಟಿ ಅವರು ತಲ್ಲೂರು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ಗೆ ಹೋಗಿ 2,50,000 ರೂ. ನಗದನ್ನು ಡ್ರಾ ಮಾಡಿಕೊಂಡಿದ್ದರು. 2 ಲಕ್ಷ ರೂ.ಗಳನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದರು. ಕಾರನ್ನು ತಲ್ಲೂರಿನ ಎಂಡಿ ಫ್ಲ್ಯಾಟ್ ನ ಎದುರು ಮುಖ್ಯರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಅದೇ ಫ್ಲಾಟ್‌ನಲ್ಲಿರುವ ಮನೆಗೆ ಹೋಗಿದ್ದರು. ಸಂಜೆ ಕಾರಿನ ಬಳಿ ಬಂದಾಗ ಎಡಬದಿಯ ಬಾಗಿಲ ಗಾಜು ಒಡೆದಿರುವುದು ಕಂಡುಬಂತು. ಬಾಗಿಲು ತೆರೆದು ನೋಡಿದಾಗ ಡ್ಯಾಶ್ ಬೋರ್ಡ್‌ನಲ್ಲಿಟ್ಟಿದ್ದ ನಗದು ಕಳವಾಗಿತ್ತು. ಪ್ರಕರಣ ದಾಖಲಾಗಿದೆ






