ಇತರೆ
ಸಂಬಳ ವಿಳಂಬ ಹಿನ್ನೆಲೆ: ಡೆತ್‌ನೋಟ್‌ನಲ್ಲಿ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರ ಹೆಸರು ಬರೆದು ಗ್ರಂಥಪಾಲಕಿ ಆತ್ಮಹತ್ಯೆ

Views: 94
ಕನ್ನಡ ಕರಾವಳಿ ಸುದ್ದಿ:ಸಂಬಳ ವಿಳಂಬ ಹಿನ್ನೆಲೆ ಡೆತ್ ನೋಟ್‌ನಲ್ಲಿ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರ ಹೆಸರು ಬರೆದಿಟ್ಟು ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ.
3 ತಿಂಗಳ ಸಂಬಳ ಆಗದ ಹಿನ್ನೆಲೆ ಗ್ರಂಥಪಾಲಕಿ ಭಾಗ್ಯವಂತಿ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಭಾಗ್ಯವಂತಿ ಮಳಖೇಡ ಗ್ರಾಮ ಪಂಚಾಯತಿ ಆವರಣದಲ್ಲಿರುವ ಅರಿವು ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಂಬಳಕ್ಕಾಗಿ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ ಗ್ರಾಪಂ ಆಡಳಿತ ಮಂಡಳಿ ಸ್ಪಂದಿಸದ ಕಾರಣ ಬೇಸತ್ತು ಗ್ರಾಮ ಪಂಚಾಯತಿ ಆವರಣದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್‌ನಲ್ಲಿ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರ ಹೆಸರು ಉಲ್ಲೇಖ ಮಾಡಿರುವ ಹಿನ್ನೆಲೆ ಇಬ್ಬರನ್ನು ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.