ಇತರೆ
ಪತ್ನಿಯನ್ನು ಕೊಂದು ಕೊಳವೆ ಬಾವಿಯಲ್ಲಿ ಹೂತಿಟ್ಟ ಪತಿ

Views: 62
ಕನ್ನಡ ಕರಾವಳಿ ಸುದ್ದಿ: ಹೆಂಡತಿಯನ್ನುಕೊಂದು ಶವವನ್ನು ಕೊಳವೇ ಬಾವಿಯಲ್ಲಿ ಹೂತು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾರತಿ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಒಂದೂವರೆ ತಿಂಗಳ ಹಿಂದೆ ನಡೆದಿದ್ದು ಪ್ರಕರಣ, ತನಿಖೆಯಲ್ಲಿ ಗಂಡನೇ ಹಂತಕ ಎನ್ನುವುದು ಬಹಿರಂಗವಾಗಿದೆ. ತವರಿಗೆ ಹೊರಟಿದ್ದ ಪತ್ನಿ ಭಾರತಿ ಕೆನ್ನೆಗೆ ಪತಿ ವಿಜಯ್ ಹೊಡೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ.
ಬಂಧನದ ಭೀತಿಯಿಂದ ಪತ್ನಿಯ ಶವವನ್ನು ತಮ್ಮ ತೋಟದ ಕೊಳವೆ ಬಾವಿಯಲ್ಲಿ ಹೂತುಹಾಕಿ ಕಡೂರು ಠಾಣೆಗೆ ಪತ್ನಿ ನಾಪತ್ತೆಯಾಗಿದ್ದಾಳೆಂದು ವಿಜಯ್ ದೂರು. ಒಂದೂವರೆ ತಿಂಗಳ ನಂತರ ಪೊಲೀಸರ ತನಿಖೆಯಲ್ಲಿ ಪತಿ ವಿಜಯೇ ಹಂತಕನೆಂದು ತನಿಖೆಯಿಂದ ಸಾಬೀತು ಆಗಿದೆ.
ಕಡೂರು ಪೊಲೀಸರಿಂದ ವಿಜಯ್, ಅತ್ತೆ, ಮಾವ ಗೋವಿಂದಪ್ಪ ಬಂಧನಕ್ಕೆ ಒಳಗಾಗಿದ್ದಾರೆ.ಕೊನೆಗೆ ಕಿರಾತಕ ಪತಿ ಸಿಕ್ಕಿ ಹಾಕಿಕೊಂಡಿದ್ದಾನೆ.