ಶಿಕ್ಷಣ
ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ “ಕಿಡ್ಸ್ ಮಾರ್ಕೇಟ್ ಡೇ”

Views: 24
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಮಾಂಟೇಸರಿ ಮಕ್ಕಳಿಗಾಗಿ ‘ಗುರುಕುಲ ಕಿಡ್ಸ್ ಮಾರ್ಕೆಟ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ. ಮಕ್ಕಳಿಗೆ ಎಳವೆಯಲ್ಲಿಯೇ ನಮ್ಮ ಸುತ್ತಮುತ್ತಲಿನ ಪರಿಸರದ ಕುರಿತಾಗಿ ಮಾಹಿತಿ ಹಾಗೂ ನಮ್ಮ ದಿನ ಬಳಕೆಯ ಹಣ್ಣು ಹಂಪಲುಗಳನ್ನು ಪರಿಚಯಿಸುವುದು ಅತಿ ಅಗತ್ಯವಾಗಿದೆ. ಪುಟ್ಟ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದರು. ಮಕ್ಕಳ ಮಾರುಕಟ್ಟೆಯೊಂದಿಗೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ಡಾ.ರೂಪಾಶಣೈ ರವರು ಪುಟ್ಟ ಮಕ್ಕಳಿಗೆ ಶುಭಕೋರಿದರು. ಪುಟಾಣಿಗಳಾದ ಶ್ರೀ ಕೃಷ್ಣ ಮತ್ತು ಅದ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.