ಕರಾವಳಿ

ಧರ್ಮಸ್ಥಳ ಬುರುಡೆ ರಹಸ್ಯ ಭೇದಿಸುತ್ತಿರೋ ಪ್ರಕರಣಕ್ಕೆ ಮಾನವ ಹಕ್ಕುಗಳ ಆಯೋಗ ಎಂಟ್ರಿ

Views: 174

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಭೇದಿಸುತ್ತಿರೋ ಎಸ್ಐಟಿ ತಂಡ ನೆಲ ಅಗೆದು, ಬಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ. ಈ ಮಧ್ಯೆ ಜಿಪಿಆರ್ ಕಾರ್ಯಾಚರಣೆಗೆ ಎಂಟ್ರಿಕೊಟ್ಟಿರೋದು ಎಸ್ಐಟಿಗೆ ಆನೆ ಬಲ ಬಂದಂತಾಗಿದೆ.

ಧರ್ಮಸ್ಥಳದಲ್ಲಿ ಕೆಲವರು ನಾಪತ್ತೆ ಆರೋಪದ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಅಖಾಡಕ್ಕಿಳಿದ ಡ್ರೋನ್ ಮೌಂಟಡ್ ರಾಡಾರ್ ಮೇಲೆ ನಿರೀಕ್ಷೆ ಬೆಟ್ಟದಷ್ಟಾಗಿದೆ. ಈ ಮಧ್ಯೆ ಮಾನವ ಹಕ್ಕುಗಳ ಆಯೋಗ ಧರ್ಮಸ್ಥಳದ ಹಾದಿಯಲ್ಲಿ ಹೆಜ್ಜೆ ಹಾಕಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ NHRC ಅಂದ್ರೆ ಮಾನವ ಹಕ್ಕುಗಳ ಆಯೋಗ ಎಂಟ್ರಿಯಾಗಿದೆ. ಕಳೆದ ರಾತ್ರಿಯೇ ಕಾರ್ಯಾಚರಣೆಗಿಳಿದ ಆಯೋಗ, ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಣ್ಣು ಸುರಿದ ಆರೋಪ ಹೊತ್ತಿರುವ 16ನೇ ಪಾಯಿಂಟ್ನಲ್ಲೂ ಪರಿಶೀಲಿಸಿದೆ. ಓರ್ವ ಐಪಿಎಸ್ ಅಧಿಕಾರಿ ಸೇರಿ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿರೋ ನಾಲ್ವರು ಅಧಿಕಾರಿಗಳ ತಂಡ ಇಂದು ಮತ್ತೆ ಅಖಾಡಕ್ಕೆ ಇಳಿಯಲಿದೆ.

ನಿನ್ನೆ ನೇತ್ರಾವತಿ ನದಿ ತೀರದಲ್ಲಿ 13ನೇ ಪಾಯಿಂಟ್ನಲ್ಲಿ ಗಿಡಗಂಟಿಗಳ ಮಧ್ಯೆ ರೌಂಡ್ಸ್ ಹಾಕಿದ್ದ ಡ್ರೋನ್ ಮೌಂಟಡ್ ರಾಡಾರ್ಗೆ ಯಾವುದೇ ಕರುಹು ಪತ್ತೆಯಾಗಿರಲಿಲ್ಲ. ಇಂದು ಮತ್ತೆ ಜಿಪಿಆರ್ ಅಖಾಡಕ್ಕಿಳಿಯಲಿದೆ.

ಜಿಪಿಆರ್ ಮೇಲಿನ ಕುತೂಹಲ ಮತ್ತೊಂದು ಕಡೆ ಮಾನವ ಹಕ್ಕು ಆಯೋಗದ ಬಲ ಶವ ಹೂತಿಟ್ಟ ಆರೋಪದ ಪ್ರಕರಣವನ್ನು ಮತ್ತಷ್ಟು ಜಟಿಲವಾಗಿಸಿದೆ. ಇಂದು ಡ್ರೋನ್ ಮೌಂಟಡ್ ರಾಡಾರ್ ಯಾವುದಾದ್ರೂ ಕುರುಹುಗಳನ್ನ ಪತ್ತೆ ಹಚ್ಚುತ್ತಾ ಕಾದು ನೋಡಬೇಕಿದೆ.

Related Articles

Back to top button
error: Content is protected !!