ಶಿಕ್ಷಣ

ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್: ರಕ್ಷಾಬಂಧನ ಹಾಗೂ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ

Views: 42

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ರಕ್ಷಾಬಂಧನ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆಯನ್ನು ಅಗಸ್ಟ್ 8ರಂದು ನಡೆಸಲಾಯಿತು.

ನಾಡಿನ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಉದ್ದೇಶದ ಈ ಸುಂದರ ಕಾರ್ಯಕ್ರಮವನ್ನು ಉದ್ದೇಶಿಸಿ, ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶಣೈಯವರು ಮಾತನಾಡುತ್ತಾ, ರಕ್ಷಾಬಂಧನ ಕೇವಲ ಅಣ್ಣ ತಂಗಿಯರ ಬಾಂಧವ್ಯವನ್ನು ಮಾತ್ರ ಗಟ್ಟಿಗೊಳಿಸುವುದಾಗಿರದೆ ಇಡೀ ಸುದೃಢ ಸಮಾಜವನ್ನು ನಿರ್ಮಿಸುವುದಕ್ಕೆ ಇದು ಪೂರಕವಾಗಿದೆ ಎಂದರು.1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ ಮಹತ್ವ ಮತ್ತು ಮಹಾತ್ಮ ಗಾಂಧಿಯವರ ಅವಿರತ ಹೋರಾಟದ ಬದುಕನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ರಕ್ಷಾ ಬಂಧನಕ್ಕೆ ಶುಭಕೋರಿದರು. ಯು ಕೆ ಜಿ ಮತ್ತು ಎಲ್ ಕೆ ಜಿ ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸಲಾಯಿತು. ವಿದ್ಯಾರ್ಥಿನಿ ಅವನಿ ಕಾರ್ಯಕ್ರಮ ನಿರೂಪಿಸಿದ್ದು, ವಿದ್ಯಾರ್ಥಿ ಶಶಾಂಕ್ ಅಂತಿಮವಾಗಿ ಸರ್ವರನ್ನು ವಂದಿಸಿದರು.

Related Articles

Back to top button
error: Content is protected !!