ಶಿಕ್ಷಣ
ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಗೆ ಶುದ್ಧ ಕುಡಿಯುವ ನೀರಿನ ಶೋಧಕ ಹಸ್ತಾಂತರ

Views: 109
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ನಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೆಚ್ಚುವರಿಯಾಗಿ ಆರಂಭವಾದ ಕಿರಿಯ ಪ್ರಾಥಮಿಕ ವಿಭಾಗಗಳ ವಿದ್ಯಾರ್ಥಿಗಳ ಹೊಸ ಬ್ಲಾಕ್ ಗೆ ಶ್ರೀಯುತ ಸತೀಶ್ ಪೂಜಾರಿ ಹಾಗೂ ಶ್ರೀಮತಿ ರಾಧಿಕ ಪೂಜಾರಿ ಇವರು ಉದಾರ ಮನಸ್ಸಿನಿಂದ ಕುಡಿಯುವ ನೀರಿನ ಘಟಕವನ್ನು ಅಗಸ್ಟ್ 2ರಂದು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಕೊಡುಗೆಯನ್ನು ಸ್ವೀಕರಿಸಿದ ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟಾ ಲೋಬೋ ಇವರು ದಾನಿಗಳಿಗೆ ಕೃತಜ್ಞತಾ ಪೂರ್ವಕ ಮಾತುಗಳ ಮೂಲಕ ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಮತಾ ಪೂಜಾರಿ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ದಾನಿಗಳಿಗೆ ಶುಭ ಹಾರೈಸಿದರು. ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮವು ಯಶಸ್ವಿಗೊಂಡಿತು.






