ಭಾರೀ ಮಳೆ ಹಿನ್ನೆಲೆಯಲ್ಲಿ ಇಂದು (ಜುಲೈ 25)ಬೈಂದೂರು ವಲಯದ ಶಾಲೆಗಳಿಗೆ ರಜೆ

Views: 373
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸೂಚನೆಯಂತೆ ಬೈಂದೂರು ವಲಯದ ಶಾಲೆಗಳಿಗೆ ಇಂದು (ಜುಲೈ 25) ರಂದು ರಜೆ ಇರಲಿದೆ ಎಂದು ಬಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ ಜು.25 ರಂದು ಬೆಳಗ್ಗೆ 8.30 ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. 8.30ರ ಬಳಿಕ ಜು.28ರವರೆಗೆ ‘ಆರೆಂಜ್ ಅಲರ್ಟ್’ ಇದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಮನ್ಸೂಚನೆಯಂತೆ ಶುಕ್ರವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ರೆಡ್ ಅಲರ್ಟ್ ಇದ್ದುದ್ದರಿಂದ ಪಿಯು ಕಾಲೇಜುವರೆಗೂ ರಜೆ ನೀಡಲಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮೋಡಕವಿದ ವಾತಾವರಣದೊಂದಿಗೆ ನಿರಂತರ ಮಳೆ ಸುರಿದಿದೆ. ಅನಂತರ ಸ್ವಲ್ಪ ಬಿಡುವು ಪಡೆದ ಮಳೆ ಸಂಜೆಯ ಬಳಿಕ ಬಿರುಸುಗೊಂಡಿದೆ.
ಉಡುಪಿ, ಕಾರ್ಕಳ, ಮಲ್ಪೆ ಮಣಿಪಾಲ, ಬ್ರಹ್ಮಾವರ, ಉದ್ಯಾವರ, ಕಟಪಾಡಿ, ಕಾಪು, ಕೋಟ, ಕುಂದಾಪುರ, ಸಿದ್ದಾಪುರ, ಕೊಲ್ಲೂರು, ಬೈಂದೂರು, ಕುಂದಾಪುರ, ಹೆಬ್ರಿ ಸಹಿತ ವಿವಿಧೆಡೆ ಉತ್ತಮ ಮಳೆ ಸುರಿದಿದೆ. ಒಂದೆರೆಡು ದಿನ ವೇಗದ ಗಾಳಿ ಬೀಸುವ ಜತೆಗೆ ಮಳೆಯ ತೀವ್ರತೆ ಹೆಚ್ಚಿರುವುದರಿಂದ ಮೀನುಗಾರರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.






