ಕರಾವಳಿ
ಬೈಂದೂರು: ಕೋಳಿ ಅಂಕದ ಮೇಲೆ ದಾಳಿ, ಐವರು ವಶಕ್ಕೆ

Views: 113
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಬೈಂದೂರು ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ. ಉಳಿದವರು ಸ್ಥಳದಿಂದ ಓಡಿ ಹೋಗಿದ್ದಾರೆ.
ಪಿಎಸ್ ಐ ಬೈಂದೂರು ತಿಮ್ಮೇಶ್ ಬಿ ಎನ್ ರವರು ಕೋಳಿ ಅಂಕ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ, ಜಯದೀಪ ಖಾರ್ವಿ, ಮಧುಕರ ದೇವಾಡಿಗ, ಹೆರಿಯಣ್ಣ ಪೂಜಾರಿ, ಸೋಮಶೇಖರ, ರಾಘವೇಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ.
5 ಕೋಳಿ ಹುಂಜಗಳನ್ನು ಹಾಗೂ ಕೋಳಿ ಅಂಕಕ್ಕೆ ಪಣವಾಗಿಟ್ಟ 1,490/- ಮತ್ತು 2 ಹರಿತವಾದ ಕೋಳಿ ಚೂರಿ ಮತ್ತು 2 ದಾರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.