ಇತರೆ

ಜನಿವಾರ, ಮಾಂಗಲ್ಯ ತೆಗೆಯುವ ಅನೇಕ ವರ್ಷಗಳಿಂದ ಇದ್ದ ನಿಬಂಧನೆ ವಾಪಸ್ 

Views: 126

ಕನ್ನಡ ಕರಾವಳಿ ಸುದ್ದಿ: ಸಿಇಟಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಜನಿವಾರ, ಮಾಂಗಲ್ಯ ಸರ ತೆಗೆಯುವ ನಿಬಂಧನೆ ಭಾರೀ ವಿವಾದಕ್ಕೆ ಗುರಿಯಾಗಿತ್ತು.ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಮಹತ್ವದ ತೀರ್ಮಾನಕ್ಕೆ ಬಂದಿದೆ. ನಾಳೆಯಿಂದ ನಡೆಯುವ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಯ ಪರೀಕ್ಷೆಗೆ ಈ ಹಿಂದೆ ಇದ್ದ ಆದೇಶವನ್ನು ವಾಪಸ್ ಪಡೆಯಲಾಗಿದೆ.

ನಾಳೆಯಿಂದ ರೈಲ್ವೇ ಇಲಾಖೆಯ ಪರೀಕ್ಷೆ ನಡೆಯುತ್ತಿದ್ದು, ಅನೇಕ ವರ್ಷಗಳಿಂದ ಇದ್ದ ನಿಬಂಧನೆಗಳನ್ನು ವಾಪಸ್ ಪಡೆಯಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಮಾಂಗಲ್ಯ, ಜನಿವಾರ ತೆಗೆಯಬೇಕು ಎಂಬ ಆದೇಶ ಬದಲಿಸಲಾಗಿದೆ. ಇನ್ಮುಂದೆ ಮಾಂಗಲ್ಯ, ಜನಿವಾರ ತೆಗೆಯುವಂತಿಲ್ಲ. ಈ ಹಿಂದೆ‌ ಇದ್ದ ಆದೇಶ ವಾಪಸ್ ಪಡೆಯಲಾಗಿದೆ. ದೇಶಾದ್ಯಂತ ನಾಳೆಯಿಂದಲೇ ಈ ನಿಯಮ ಅನ್ವಯವಾಗಲಿದೆ ಎಂದರು.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ಈ ಬಗ್ಗೆ ಇಂದು ಸುದೀರ್ಘವಾದ ಸಭೆ ನಡೆಸಿದ್ದೇವೆ. ಅನೇಕ ವರ್ಷಗಳಿಂದ ಪರೀಕ್ಷೆ ಬರೆಯಲು ಈ ನಿಬಂಧನೆಗಳು ಇದ್ದವು. ಜನಿವಾರ ತೆಗೆಯದಂತೆ ಇಂದೇ ಆದೇಶ ಆಗಬೇಕು ಎಂದು ಮನವಿ ಮಾಡಿದೆ. ಹೀಗಾಗಿ ಸುಮಾರು ವರ್ಷದಿಂದ ಇದ್ದ ಕಟ್ಟು ಪಾಡುಗಳನ್ನು ತೆಗದುಹಾಕಲಾಗಿದೆ. ಮಾಂಗಲ್ಯ, ಜನಿವಾರ ತೆಗೆಯುವಂತಿಲ್ಲ ಎಂದು ರೈಲ್ವೇ ಇಲಾಖೆಯಿಂದ ಆದೇಶ ಆಗಿದೆ. ಅಭ್ಯರ್ಥಿಗಳಿಗೆ ಇದ್ದ ಗೊಂದಲ ನಿವಾರಣೆ ಆಗಿದ್ದು, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

 

Related Articles

Back to top button