ಮಣೂರು: ಜಾತ್ರೆಗೆಂದು ತೆರಳಿದ್ದ ವೇಳೆ ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ಕದ್ದ ಆರೋಪಿ ಸೆರೆ

Views: 68
ಕನ್ನಡ ಕರಾವಳಿ ಸುದ್ದಿ: ಕೋಟ ಮಣೂರಿನಲ್ಲಿ ಮನೆ ಮಂದಿ ಹತ್ತಿರದ ದೇವಸ್ಥಾನದ ಜಾತ್ರೆಗೆಂದು ತೆಳಿದ್ದ ಸಂದರ್ಭ ಬಾಗಿಲು ಮುರಿದು ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ಕಳವು ಮಾಡಿದ್ದ ಮಣೂರು ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ (38) ಅವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಈತನಿಂದ 25 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ಮನೆಯ ಹತ್ತಿರದ ದೇವಸ್ಥಾನದ ಜಾತ್ರೆಗೆಂದು ಮನೆಯವರು ರುದ್ರಮ್ಮ ಅವರನ್ನು ಬಿಟ್ಟು ಹೋಗಿದ್ದರು.ಪ್ರತಿದಿವಸದಂತೆ ಊಟ ಮಾಡಿ ಮಲಗುವಾಗ ತಾನು ಧರಿಸಿದ್ದ ಚಿನ್ನದ ಸರವನ್ನು ಕಳಚಿ ಮಂಚದ ಮೇಲೆ ಇಟ್ಟಿದ್ದರು. ಜಾತ್ರೆಗೆ ತೆರಳಿದ್ದ ಅಳಿಯ ಶ್ರೀಧರ್ ಮನೆಗೆ ಬಂದಾಗ ಬಾಗಿಲು ಒಡೆದಿರುವುದು ಕಂಡುಬಂದಿದೆ. ಈ ಬಗ್ಗೆ ರುದ್ರಮ್ಮರನ್ನು ವಿಚಾರಿಸಿದಾಗ, ಯಾರೋ ಒಬ್ಬ ಹುಡುಗ ಬಂದಿದ್ದ ನನಗೆ ಕಣ್ಣುಕಾಣದಿರುವುದರಿಂದ ಯಾರೆಂದು ತಿಳಿಯಲಿಲ್ಲ. ನಾನು ನೀವೇ ಬಂದಿರಬಹುದು ಎಂದು ಜಾತ್ರೆ ಮುಗಿಯಿತಾ? ಎಂದು ಆತನಲ್ಲಿ ಕೇಳಿದಾಗ ಅವನು ಮನೆಯವರಂತೆಯೇ ಮಾತನಾಡಿದ್ದೆ ಎಂದು ತಿಳಿಸಿದ್ದರು. ಆಗ ಅನುಮಾನಗೊಂಡು ಶ್ರೀಧರ್ ಹುಡುಕಿದಾಗ 30 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ.ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ತನಿಖೆ ಆರಂಭಿಸಿದ ಪೊಲೀಸರಿಗೆ ಅಪರಾಧಿ ಹಿನ್ನೆಲೆಯ ಪ್ರವೀಣ್ ಕುಮಾರ್ ಶೆಟ್ಟಿ ಜಾತ್ರೆಗೆ ತೆರಳಿದ್ದು ತಿಳಿದು ಬಂತು. ಅನಂತರ ಆತನನ್ನು ಕರೆಸಿ ವಿಚಾರಣೆ ನಡೆಸಿ, ಮೊಬೈಲ್ ನೆಟ್ವರ್ಕ್ ಇನ್ನಿತರ ಸಾಕ್ಷಿಗಳ ಆಧಾರದಲ್ಲಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಮೂಲತಃ ಮಣೂರಿನವನಾಗಿದ್ದು ಸುಮಾರು 10 ವರ್ಷಗಳ ಹಿಂದೆ ಹೈದ್ರಾಬಾದ್ನಲ್ಲಿ ವಾಸವಾಗಿದ್ದ ಅಲ್ಲಿ ಕೂಡ ಈತನ ವಿರುದ್ದ ಅನೇಕ ಕೇಸುಗಳು ದಾಖಲಾಗಿದ್ದವು.






