ಇತರೆ
ಬಟ್ಟೆ ತೊಳೆಯಲು ಹೋದ ಮೂವರು ಮಹಿಳೆಯರು ಜಾರಿ ಬಿದ್ದು ನೀರುಪಾಲು

Views: 78
ಕನ್ನಡ ಕರಾವಳಿ ಸುದ್ದಿ: ಬಟ್ಟೆ ತೊಳೆಯಲೆಂದು ಕೆರೆಗೆ ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಬಿದ್ದು ಜಲಸಮಾಧಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಕ್ಷ್ಮೀ ಸಾಗರ ದುಗ್ಗೇನಹಳ್ಳಿಯಲ್ಲಿ ನಡೆದಿದೆ.
ದೀಪಾ (28), ದಿವ್ಯಾ (26) ಹಾಗೂ ಚಂದನಾ (19) ಮೃತರು. ಬಟ್ಟೆ ತೊಳೆಯಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ
ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ.