ಶಿಕ್ಷಣ

ಮದರ್ ತೆರೇಸಾಸ್ ಪದವಿಪೂರ್ವ ಕಾಲೇಜು: ಭರ್ಜರಿ ರಾಂಕ್ ಪಡೆದು ಸಾಧನೆ 

Views: 146

ಕನ್ನಡ ಕರಾವಳಿ ಸುದ್ದಿ: ಕುಂದಾಪುರ  ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮದರ್ ತೆರೇಸಾಸ್ ಪದವಿಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಮಂಗಳೂರು ವಿ ವಿ ಪರೀಕ್ಷೆಯಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಎಂ ಕಾಮ್ ವಿಭಾಗದ ಪರೀಕ್ಷೆ ಯಲ್ಲಿ ಕುಮಾರಿ ಪ್ರತೀಕ್ಷಾ ಪಿ ಎಸ್ ದ್ವಿತೀಯ ರಾಂಕ್, ಮತ್ತು ಕುಮಾರಿ ಕೀರ್ತನಾ ಬಿಸಿ ಎವಿಭಾಗದ ಪರೀಕ್ಷೆಯಲ್ಲಿ ಐದನೇ ರಾಂಕ್ ಹಾಗೂ ಕುಮಾರ.ಸಚಿನ್ ವಿ ಎನ್, ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರು ಬಿಸಿಎ ವಿಭಾಗದ ಪರೀಕ್ಷೆಯಲ್ಲಿ ನಾಲ್ಕನೇ ರಾಂಕ್ ಪಡೆದು ಸಂಸ್ಥೆಯ ಕೀರ್ತಿಯನ್ನು ಬೆಳಗಿಸಿದ್ದಾರೆ
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಊರ್ಜಿತ ಗೊಳಿಸಿಕೊಂಡು ಪುಟ್ಟ ಪುಟ್ಟ ಹಣತೆಗಳಾಗಿ ಬೆಳಗಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಬೆಳಗಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತಮಂಡಳಿ, ಪ್ರಾಂಶುಪಾಲರು, ಉಪ – ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Related Articles

Back to top button
error: Content is protected !!