ಧಾರ್ಮಿಕ

ಡಾ.ಗಣೇಶ್ ಗಂಗೊಳ್ಳಿ ಸಂಯೋಜನೆಯಲ್ಲಿ “ಬೆಳ್ಳಿ ರಥವನ್ನೇರಿ ಬರುವನೋ ಶ್ರೀ ಕೋಟಿಲಿಂಗೇಶ್ವರ” ಭಕ್ತಿ ಗಾನಾಮೃತ ಧ್ವನಿ ಸುರುಳಿ ಫೋಸ್ಟರ್ ಬಿಡುಗಡೆ 

Views: 51

ಕನ್ನಡ ಕರಾವಳಿ ಸುದ್ದಿ:ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ಇಲ್ಲಿ ಕೊಡಿ ಹಬ್ಬದ ಪ್ರಯುಕ್ತ ಆಸ್ತಿಕ ಸಮಾಜ ಶ್ರೀ ಕ್ಷೇತ್ರ ಧ್ವಜಪುರ ಇವರು ಹಮ್ಮಿಕೊಂಡ ಪ್ರಸಿದ್ಧ ಗಾಯಕ ಡಾ.ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ಶುಕ್ರವಾರ ಜರುಗಿತು.

ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಲ್ಲಿ, ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕರಾದ ರೋಹಿತ್ ಕುಮಾರ್ ಮಲ್ಪೆ ಇವರ ವಾದ್ಯ ಸಂಯೋಜನೆಯಲ್ಲಿ ಮೂಡಿಬರಲಿರುವ , ಶ್ರೀ ಕ್ಷೇತ್ರದ ಕುರಿತಾದ ಭಕ್ತಿ ಗಾನಮೃತ ಧ್ವನಿ ಸುರುಳಿ ಬೆಳ್ಳಿ ರಥವನೇರಿ ಬರುವನೋ ಶ್ರಿಕೋಟಿಲಿಂಗೇಶ್ವರನು ಈ ಇದರ ಫೋಸ್ಟರನ್ನು ಹೆಸರಾಂತ ಹೋಟೆಲ್ ಉದ್ಯಮಿ ಹಾಗೂ ಕೊಡುಗೈ ಧಾನಿಗಳಾದ ಶ್ರೀ ಎನ್ ರಾಘವೇಂದ್ರ ರಾವ್ ಅವರು ಬಿಡುಗಡೆಗೊಳಿಸಿದರು.

ಇವರೊಂದಿಗೆ ದೇವಳದ ಮಾಜಿ ಧರ್ಮದರ್ಶಿಗಳು ಕಲಾ ಪೋಷಕರು ಆದ ಶ್ರೀ ಗೋಪಾಲ ಶೆಟ್ಟಿ, ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ, ಮತ್ತು ಆಸ್ತಿಕ ಸಮಾಜ ಧ್ವಜಪುರದ ಮುಖ್ಯಸ್ಥರಾದ ಶ್ರೀ ರವೀಂದ್ರ ಐತಾಳ್, ಮತ್ತು ವಿನೋದ್ ಶೆಟ್ ಅವರು ಕಲಾವಿದರಾದ, ಶಶಿ ಹೆಜಮಾಡಿ. ಸಖರಾಮ್ ಮಾಸ್ತರ್ ಹಾವಂಜೆ , ನವೀನ ಶೆಟ್, ರಾಜು ಬೀಜಾಡಿ, ವಿಜಯಲಕ್ಷ್ಮಿ ಉಡುಪಿ ಉಪಸ್ಥಿತರಿದ್ದರು.

Related Articles

Back to top button
error: Content is protected !!