ಕುಂದಾಪುರ:”ಮಕ್ಕಳ ಸ್ನೇಹಿ ಗ್ರಂಥಾಲಯ” ಉದ್ಘಾಟನೆ

Views: 137
ಕುಂದಾಪುರ:ಮಕ್ಕಳ ಸ್ನೇಹಿ ಗ್ರಂಥಾಲಯ ಈ ಕುರಿತು ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಕುಂದಾಪುರ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಕುಂದಾಪುರ ಕಾರ್ಯನಿರ್ವಹಕ ಅಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಅವರು ಗಿಡಕ್ಕೆ ನಿರುಣಿಸುವುದರೊಂದಿಗೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ತರಬೇತು ಕಾರ್ಯಕ್ರಮದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಒಟ್ಟು 45 ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿ ತರಬೇತಿ ಪ್ರಯೋಜನ ಪಡೆದರು.
ತರಬೇತಿಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ಒಂದು ಪರಿಕಲ್ಪನೆ ಕುರಿತು ಹಾಗೂ ಮಕ್ಕಳ ಆಸಕ್ತಿದಾಯಕ ವಿಷಯಗಳಾದ ಕಥೆ, ಚಿತ್ರ, ಪುಸ್ತಕಗಳು, ಓದುವ ಹವ್ಯಾಸ, ಪಕ್ಷಿಗಳ ಕುರಿತು, ಮೌಲ್ಯ ಮನೋಭಾವ ಕೌಶಲ್ಯ ಈ ಮೂಲಕ ಮಕ್ಕಳ ಕುರಿತು ಆರ್ಥ ಮಾಡಿಕೊಳ್ಳುವ ವಿಧಾನ, ಮಕ್ಕಳ ಉತ್ತಮ ನಾಗರಿಕರಾಗಲು ಗ್ರಂಥಾಲಯ ಮೇಲ್ವಿಚಾರಕರ ಪಾತ್ರ, ಪಕ್ಷಿಪ್ರಪಂಚದ ಕುರಿತು, ಡಿಜಿಟಲ್ ಸಾಕ್ಷಾರತೆ ಮಾಹಿತಿ ಈ ಎಲ್ಲಾ ಮಾಹಿತಿ ಈ ಎರಡು ದಿನದಲ್ಲಿ ಸಿಗಲಿದೆ.
ಈ ತರಬೇತಿ ಕಾರ್ಯಕ್ರಮ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ ಮೈಸೂರು ಹಾಗೂ ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ, ಬೈಂದೂರು ತಾಲೂಕು ಪಂಚಾಯತ್ ನ ಸಹಯೋಗದಲ್ಲಿ ನಡೆಯುತ್ತಿದೆ.
ತರಬೇತುದಾರರಾಗಿ ANSIRD ಮೈಸೂರು ನ DTC ಗಳಾದ ಬಿ. ಮೋಹನ್ ಚಂದ್ರ ಕಾಳಾವರ್ಕಾರ್, ಸುನೀತಾ ಗುಜ್ಜಾಡಿ, ದೀಪ ತಲ್ಲೂರು, ಶಿಕ್ಷಣ ಫೌಂಡೇಶನ್ ಜಿಲ್ಲಾ ಸoಯೋಜಕಿ ರೀನಾ ಹೆಗ್ಡೆ ವಿಶೇಷ ಉಪಸ್ಥಿತರು ಆಗಿದ್ದರು,











