ಕರಾವಳಿ

ಯಾತ್ರೆ ಮುಗಿಸಿ ವಾಪಾಸು ಬರುವಾಗ ಬಸ್ಸಿನಲ್ಲಿ ಕುಸಿದು ಬಿದ್ದು ಕುಂದಾಪುರದ ವ್ಯಕ್ತಿ ಸಾವು

Views: 289

ಕುಂದಾಪುರ: ನಾಡಾ ಪಡುಕೋಣೆಯ ವ್ಯಕ್ತಿ ಯಾತ್ರೆ ಮುಗಿಸಿ ವಾಪಾಸು ಬರುವಾಗ ಕಡಬ ಸಮೀಪ ಬಸ್ಸಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ನಾಡ ಗ್ರಾಮದ ಪಡುಕೋಣೆಯ ನಿವಾಸಿ ನಾಗೇಶ ಮಡಿವಾಳ (40) ಮೃತಪಟ್ಟವರು. ಅವರು ಉಡುಪಿಯಲ್ಲಿ ಕೊರಿಯರ್‌ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಅವರು ತಮ್ಮ ಕುಟುಂಬದವರನ್ನು ಕೂಡಿಕೊಂಡು ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದಾರೆ. ವಾಪಾಸು ಬರುವ ವೇಳೆ ಕಡಬ ಸಮೀಪ ಬಸ್ಸಿನಲ್ಲಿಯೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಕಡಬ ಆಸ್ಪತ್ರೆಗೆ ದಾಖಲು ಮಾಡಿ ನಂತರ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರೊಳಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

 

Related Articles

Back to top button
error: Content is protected !!