ರಾಜಕೀಯ
ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಅಡ್ವಾಣಿ ಆಶೀರ್ವಾದ ಪಡೆದ ಮೋದಿ

Views: 53
ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಮಾಜಿ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ, ತಮ್ಮ ರಾಜಕೀಯ ಗುರು ಎಲ್‌ಕೆ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.
ಮಧ್ಯಾಹ್ನ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ನಂತರ ನೇರವಾಗಿ ಮೋದಿ ಅವರು ದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ಅಡ್ವಾಣಿ ಮತ್ತು ಮೋದಿ ಅವರಿಗೆ ಮೊದಲಿನಿಂದಲೂ ಉತ್ತಮ ಸಂಬಂಧವಿದೆ. ಅಡ್ವಾಣಿ ಅವರ ರಥಯಾತ್ರೆಯ ಯಶಸ್ಸಿನ ಹಿಂದೆ ಮೋದಿ ಅವರ ಪಾತ್ರವಿದೆ. ಗುಜರಾತ್‌ನಲ್ಲಿ ಇದ್ದಾಗ ಮೋದಿ ಯಶಸ್ವಿ ಸಂಘಟಕರಾಗಿದ್ದರು. ಅಡ್ವಾಣಿ ಅವರು ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಾಗ ಮೋದಿ ಅವರು ಯಶಸ್ವಿಯಾಗಿ ಚುನಾವಣೆಯನ್ನು ಸಂಘಟಿಸುತ್ತಿದ್ದರು.
–






